Sunday, March 8, 2026
Flats for sale
Homeರಾಜ್ಯರಾಮನಗರ : ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ,ನಾಲ್ವರ ಬಂಧನ ..!

ರಾಮನಗರ : ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ,ನಾಲ್ವರ ಬಂಧನ ..!

ರಾಮನಗರ : ಈ ಹಣ ಈಗೇನೇ ಏನೆಲ್ಲಾ ಮಾಡಿ ಬಿಡುತ್ತೆ,ಹಣ ಕಂಡರೆ ಹೆಣ ಬಾಯಿ ಬಿಡುತ್ತೆ ಎಂಬ ಗಾದೆ ಮಾತು ಅಂತೂ ನಿಜ. ಗಂಡನಿಗೂ ತಿಳಿಸದೆ ಹಣದ ಆಸೆಗೆ ಬಿದ್ದು ತಾಯಿ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದ್ದು ಪತ್ನಿ ಹಾಗೂ ಇತರೆ ಮೂವರು ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಮಾರಾಟ ಮಾಡಿದ ಮಹಿಳೆಯನ್ನು ನಸ್ರೀನ್ ತಾಜ್ ಎಂದು ತಿಳಿದುಬಂದಿದೆ ಈ ಬಗ್ಗೆ ಪತಿ ಸದ್ದಾಂ ಪಾಷಾ ಎಂಬುವರು ಪತ್ನಿ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ನಸ್ರೀನ್ ತಾಜ್ 6 ವರ್ಷಗಳ ಹಿಂದೆ ರಾಮನಗರದ ಯಾರಬ್ ನಗರದ ನಿವಾಸಿ ಸದ್ದಾಂ ಪಾಷರವರನ್ನು ಮದುವೆಯಾಗಿದ್ದು,ಗಂಡ ಸದ್ದಾಂ ಪಾಷ ಲಡ್ಡ ಆರೀಫ್ ಪಿಲ್ಲೇಚೆರಿ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಇವರಿಗೆ ಮಹಮ್ಮದ್ ಫಾರನ್ ಮತ್ತು ಮಹಮ್ಮದ್ ಸಾಹಿಲ್ (ಅವಳಿ ಮಕ್ಕಳು) ಎಂಬ ಎರಡೂವರೆ ವರ್ಷದ ಮಕ್ಕಳು ಇದ್ದರು. ಮನೆಯಲ್ಲಿ ಪತ್ನಿ, ಮಕ್ಕಳ ಜೊತೆಗೆ ಆಕೆಯ ತಾಯಿ ತಸ್ಕೀನ್ ತಾಜ್ ವಾಸವಿದ್ದರು.

ಸದ್ದಾಂ ಪಾಷ ಸಾಕಷ್ಟು ಸಾಲ ಮಾಡಿಕೊಂಡಿದ್ದನು. ತಿಂಗಳ ಹಿಂದೆ ನಸ್ರೀನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಾಲ ತೀರಿಸುವ ಕಾರಣಕ್ಕಾಗಿ ಕೊನೆಯ ಮಗುವನ್ನು ಮಾರಾಟ ಮಾಡುವಂತೆ ನಸ್ರೀನ್, ಸದ್ದಾಂಗೆ ಪೀಡಿಸುತ್ತಲೇ ಬಂದಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದನು. ಕೊನೆಗೆ ಡಿ.5ರಂದು ಪತಿ ಕೆಲಸಕ್ಕೆ ಹೋಗಿದ್ದಾಗ ನಸ್ರೀನ್ ಸ್ಥಳೀಯರಾದ ಅಸ್ಲಾಂ ಹಾಗೂ ಫಾಹಿಮಾ ಸಹಾಯದೊಂದಿಗೆ ಬೆಂಗಳೂರಿನ ನಿವಾಸಿ ತರನಂ ಸುಲ್ತಾನ ಎಂಬುವವರಿಗೆ ಗಂಡು ಮಗುವನ್ನು ನೀಡಿದ್ದಾಳೆ. ತರನಂ ಸುಲ್ತಾನ್ ಆ ಮಗುವನ್ನು ತನ್ನ ಸಂಬಂಧಿ ಶಾಜಿಯಾ ಬಾನು ಅವರಿಗೆ ಮಾರಾಟ ಮಾಡಿದ್ದಾಳೆ.ಈ ಬಗ್ಗೆ ಅನುಮಾನಗೊಂಡ ಪತಿ ಪತ್ನಿ ನಸ್ರೀನ್ ತಾಜ್ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ವಿಚಾರಣೆ ಬಳಿಕ ಮಗು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.ರಾಮನಗರ ಯಾರಬ್ ನಗರದ ನಿವಾಸಿಗಳಾದ ಸದ್ದಾಂ ಪಾಷ ಹಾಗೂ ನಸ್ರೀನ್ ದಂಪತಿ ಮಗುವನ್ನು ರಕ್ಷಿಸಲಾಗಿದ್ದು, ಪೋಷಣೆ ಮಾಡಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಜಿತಾ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular