ಉಳ್ಳಾಲ: ಡಿ.26ಕೊಣಾಜೆ ಪೊಲೀಸ್ ಠಾಣಾ ಖಡಕ್ ಪಿಎಸ್ಸೈ ಶರಣಪ್ಪ ಭಂಡಾರಿ ಅವರು ಡ್ರಗ್ ಸಾಗಾಟದ ವಿರುದ್ಧ ಸಮರ ಸಾರಿದ್ದು ಇಂದು ಬೆಳಿಗ್ಗೆ ಬೆಂಗಳೂರಿಂದ ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದ್ದ 3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಮತ್ತು ಕೇರಳ ಮೂಲದ ನಾಲ್ಕು ಡ್ರಗ್ ಫೆಡ್ಲರ್ ಗಳನ್ನ ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್(24) ಮಲಪ್ಪುರಂ ಜಿಲ್ಲೆಯ ಪೊಣ್ಣಾನಿ ನಿವಾಸಿ ಜಂಶೀರ್(24) ಕಾಸರಗೋಡು ಜಿಲ್ಲೆಯ ಮಂಗಳ್ಪಾಡಿ ನಿವಾಸಿ ಮಹಮ್ಮದ್ ಬಾತಿಷ್ (37) ಕಾಸರಗೋಡು ಜಿಲ್ಲೆಯ ಮುಟ್ಟತೇಡಿ ನಿವಾಸಿ ಮಹಮ್ಮದ್ ಅಶ್ರಫ್(42) ಬಂಧಿತ ಡ್ರಗ್ ಫೆಡ್ಲರ್ ಗಳು.
ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ಶರಣಪ್ಪ ಭಂಢಾರಿ ಮತ್ತು ತಂಡ ಇಂದು ಬೆಳಿಗ್ಗೆ ಠಾಣಾ ವ್ಯಾಪ್ತಿಯ ಚೇಳೂರಿನ ಚೆಕ್ ಪೋಸ್ಟಲ್ಲಿ ಗಸ್ತಲ್ಲಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿಂದ ಉಪ್ಪಿನಂಗಡಿ,ಮೆಲ್ಕಾರ್ ಮಾರ್ಗವಾಗಿ ಕೇರಳಕ್ಕೆ ಗಾಂಜಾ ಸಾಗಾಟ ನಡೆಸುತ್ತಿದ್ದ ಆಲ್ಟೋ ಕಾರನ್ನ ತಡೆದು ನಿಲ್ಲಿಸಿದ್ದಾರೆ.ಈ ವೇಳೆ ಆಲ್ಟೋ ಕಾರಲ್ಲಿ 3,19,000 ಮೌಲ್ಯದ 32.195 ಕೆ.ಜಿ ಗಾಂಜ ಸಾಗಾಟ ನಡೆಸುತ್ತಿರುವುದು ತಿಳಿದಿದೆ.ನಿಷೇಧಿತ ಗಾಂಜ,ಕಾರು ಮತ್ತು ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಸೈ ಶರಣಪ್ಪ ಅವರು ವಾರದ ಹಿಂದೆ ಡಿ.17 ರಂದು ಬೋಳಿಯಾರಲ್ಲಿ ಕಾರನ್ನ ತಡೆದು ಭಾರೀ ಪ್ರಮಾಣದ ನಿಷೇಧಿತ ಗಾಂಜಾ ಮತ್ತು ಎಮ್ ಡಿಎಮ್ ಮಾದಕ ವಸ್ತನ್ನ ದಸ್ತಗಿರಿ ನಡೆಸಿ ನಾಲ್ವರು ಫೆಡ್ಲರ್ಗಳನ್ನ ಬಂಧಿಸಿದ್ದರು.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 4 ಮೊಬೈಲ್,ಆಲ್ಟೊ ಕಾರನ್ನ ವಶ ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶೈಲೇಂದ್ರ, ಮಹಮ್ಮದ್ ಶರೀಫ್, ಮಹೇಶ್,ಪುರುಷೋತ್ತಮ್,ದೀಪಕ್ ಅಂಬರೀಷ್, ಅಶ್ವಿನ್,ಸುರೇಶ್, ಬರಮ ಬಡಿಗೇರ,ರೇಷ್ಮ,ಸುನೀತ ಭಾಗವಹಿಸಿದ್ದರು.