ಹೈದರಾಬಾದ್ : ವಿಶ್ವದಾದ್ಯಂತ ಕುತೂಹಲ ಮೂಡಿಸಿರುವ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯದ ಪುಷ್ಪ ೨ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರವನ್ನು ಡಿಸೆಂಬರ್ 5 ರಂದು ಭಾರತದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕೂ ಮೊದಲು ನವೆಂಬರ್ 17 ರಂದು ಚಿತ್ರದ ಟ್ರೆöÊಲರ್ ಬಿಡುಗಡೆ ಕಾರ್ಯಕ್ರಮ ಬಿಹಾರದ ಪಾಟ್ನಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಆದರೆ ಡಿಜಿಟಲ್ ಲಾಂಚ್ ಬದಲಿಗೆ ಬಿಹಾರದ ಪಾಟ್ನಾದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪುಷ್ಪ 2 ಚಿತ್ರದ ಟ್ರೆöÊಲರ್ ಬಿಡುಗಡೆ ಕಾರ್ಯಕ್ರಮವು ನವೆಂಬರ್ 17 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ
ಸಂಜೆ 6.30ಕ್ಕೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಪುಷ್ಪ 2 ತಂಡದ ಕಲಾವಿದರು ಹಾಗೂ ಇಡೀ ತಂಡ ಭಾಗವಹಿಸಲಿದೆ. ಈ ಸಿನಿಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಹಾಗಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ರಿಲೀಸ್ ಮಾಡಿದರೆ ಹೆಚ್ಚು ಜನಕ್ಕೆ ಕನೆಕ್ಟ್ ಆಗಬಹುದು ಎಂಬ ಕಾರಣಕ್ಕೆ ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಪುಷ್ಪ 2 ಸಿನಿಮಾ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ, ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ, ಅನಸೂಯಾ ಸೇರಿದಂತೆ ಹಲವರು ನಟಿಸಿದ್ದಾರೆ.ಚಿತ್ರದಲ್ಲಿ ಐಟಂ ಡ್ಯಾನ್ಸ್ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ.


