ನವದೆಹಲಿ : ಲಷ್ಕರ್ ಎ ತೊಯ್ಬಾದ ಉಗ್ರ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ರುವಾಂಡಾದಲ್ಲಿ ಬAಧಿಸಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಸಹಾಯ ಮಾಡುತ್ತಿದ್ದ. ಜೊತೆಗೆ ಒಮ್ಮೆ ನಾಸಿರ್ ಕೋರ್ಟ್‌ಗೆ ಹಾಜರಾದ ವೇಳೆ ಆತನ ಪರಾರಿಗೂ ಸಲ್ಮಾನ್ ಸಂಚು ರೂಪಿಸಿದ್ದ. ಆದರೆ ಭಯೋತ್ಪಾದನೆ ಸಂಚು ಬಹಿರಂಗವಾದಾಗ, ಸಲ್ಮಾನ್ ಭಾರತದಿಂದ ಪಲಾಯನ ಮಾಡಿದ್ದ ಹಾಗೂ ತಲೆಮರೆಸಿಕೊಂಡು ತಿರುಗುತ್ತಿದ್ದ. ಕೊನೆಗೆ ರುವಾಂಡಾದಲ್ಲಿ ಪತ್ತೆ ಆಗಿದ್ದ.
ಉಗ್ರ ಸಲ್ಮಾನ್ ರೆಹಮಾನ್ ಖಾನ್ ವಿರುದ್ಧದ ಆರೋಪಗಳಲ್ಲಿ ಪಿತೂರಿ, ಭಯೋತ್ಪಾದನೆ ಜನರನ್ನು ಸೇರ್ಪಡೆ ಮಾಡುವುದು, ಕ್ರಿಮಿನಲ್ ಪಿತೂರಿ ಮುಂತಾದ ಆರೋಪಗಳಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ವರ್ಷ ಪೊಲೀಸರು 7 ಪಿಸ್ತೂಲು, 4 ಹ್ಯಾಂಡ್ ಗ್ರೆನೇಡ್, ಒಂದು ಮ್ಯಾಗ್‌ಜೈನ್, 40 ಸುತ್ತು ಗುಂಡುಗಳು ಮತ್ತು ವಾಕಿ ಟಾಕಿಗಳನ್ನು ವಶಪಡಿಸಿಕೊಂಡಿದ್ದರು. ಅದೆಲ್ಲಿಂದ ಪೂರೈಕೆಯಾಗಿದೆ ಎಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಕಾಣಿಸಿದ್ದು ಖಾನ್ ಕೈವಾಡ. ಪ್ರಕಣವನ್ನು ಸಿಬಿಐಗೆ ವಹಿಸಲಾಗಿತ್ತು. ಬೆಂಗಳೂರು ಮೂಲದ ಘಟಕಗಳಿಗೆ ಹಣ ಮತ್ತು ಶಸ್ತ್ರಾಸ್ತ್ರ ಪೂರೈಸುವ ಪ್ರಮುಖ ಆಪರೇಟಿವ್ ಈತನೇ ಎಂದು ತನಿಖಾ ಸಂಸ್ಥೆ ಗುರುತಿಸಿತು. ಈ ಹಿನ್ನೆಲೆಯಲ್ಲಿ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತು. ಬಳಿಕ ಎನ್‌ಐಎ, ನ್ಯಾಷನಲ್ ಸೆಂಟ್ರಲ್ ಬ್ಯೂ ರೋ (ಎನ್‌ಸಿಬಿ) ಮತ್ತು ಇಂಟರ್‌ಪೋಲ್ ಜತೆಗಿನ ಸಂಘಟಿತ ಪ್ರಯತ್ನಗಳ ಮೂಲಕ ಸಿಬಿಐ ಈತನನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದೆ.