ಮಂಗಳೂರು ; ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಗೆ,ಮರಳುಗಾರಿಕೆ ,ಇಸ್ಪೀಟ್ ದಂದೆ ಇನ್ನಿತರ ಅಕ್ರಮ ಚಟುವಟಿಕೆಗಳು ಮತ್ತೆ ನಡೆಯುತ್ತಿರುವುದು ಬೆಳಕಿಗೆಬಂದಿದೆ ಇದಕ್ಕೆ ಜಿಲ್ಲಾಡಳಿತ,ಪೊಲೀಸ್ ಇಲಾಖೆ ಎಲ್ಲ ನೇರ ಹೊಣೆಯಾಗಿದ್ದು ಎಲ್ಲಾ ಅಧಿಕಾರಿಗಳು ದೊಡ್ಡಮಟ್ಟದ ಲಂಚ ಪಡೆದು ಮಕಾಡೆ ಮಲಗಿದ್ದಾರೆ.
ಸೋಮವಾರ ಜಿ.ಪಂ ಕಚೇರಿಯಲ್ಲಿ ನಡೆದಿದ್ದ ಕುಂದು ಕೊರತೆಗಳ ಅಹವಾಲು ಸ್ವೀಕಾರದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ಮಾಹಿತಿ ಪಡೆದಿದ್ದ ಉಪಲೋಕಾಯುಕ್ತರ ತಂಡ ಬೆಳ್ಳಬೆಳಗ್ಗೆ ೬.೩೦ ಕ್ಕೆ ನಗರದ ಸರ್ಕ್ಯೂಟ್ ಹೌಸ್ ನಿಂದ ಹೊರಟು ಬಜ್ಪೆ ಮೂಲಕ ನಿಡ್ಡೋಡಿಗೆ ತೆರಳಿದ್ದರು. ಹಠಾತ್ತನೆ ಭೇಟಿ ನೀಡಿದ ಸಂದರ್ಭದಲ್ಲಿ ಸರಕಾರಿ ಜಾಗದಲ್ಲಿ ಬಳ್ಳಾರಿಮಾದರಿಯಲ್ಲಿ ಗಂಭೀರ ರೀತಿಯಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಸಿರುವುದು ಬೆಳಕಿಗೆ ಬಂದಿದೆ .ಈ ಬಗ್ಗೆ ಸ್ಥಳಕ್ಕೆ ಭೇಟಿನೀಡಿ ಆಕ್ರೋಶಗೊಂಡ ಉಪಲೋಕಾಯುಕ್ತರು ಇದು ಬಳ್ಳಾರಿ ಮಾದರಿಯಲ್ಲೇ ಇದೆ ಹೀಗೆಯೇ ಬಿಟ್ಟರೆ ಇದು ಬಳ್ಳಾರಿಯನ್ನೂ ಮೀರಿಸಲಿದೆ ಎಂದು ಉದ್ಗರಿಸಿದ್ದಾರೆ .
ಆ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಕೃಷ್ಣವೇಣಿ ಮತ್ತು ಸತ್ಯಭಾಮ ಅವರನ್ನು ಕರೆಸಿದ್ದು ಏನಮ್ಮ ಇದಕ್ಕೆ ಲೈಸನ್ಸ್ ಇದೆಯಾ ಎಂದು ಪ್ರಶ್ನಿಸಿದಾಗ ,ಚೆಕ್ ಮಾಡುತ್ತೇನೆಂದು ಹೇಳಿದ್ದಾಗ ಇಷ್ಟು ದಿನ ಏನು ಮಾಡುತ್ತಿದ್ದೀರಿ ನೀವು ,ಸರಕಾರಿಯೋ ,ಖಾಸಗಿಯೋ ,ಎಂದು ಗೊತ್ತಿಲದವರೂ ಕೂಡ ನೀವು ಜಿಯೋಲಾಜಿಸ್ಟ್ ಗಳ ? ನಿಮಗೆಷ್ಟು ಲಂಚ ಸಿಗುತ್ತೆ ,ಮಾಮೂಲಿ ಎಷ್ಟಿದೆ ,ಸರಕಾರಿ ಜಾಗದಲ್ಲಿ ಮಣ್ಣು ಸುರಿದರು ಸುಮ್ಮನಿದ್ದೀರಿ ನೀವು ಸೈಲೆಂಟ್ ಗಿರಾಕಿಗಳು ,ನಿಮಗೆ ಖಜಾನೆ ತುಂಬಿರಬೇಕು ಹಾಗೆಯೆ ನೀವು ಸುಮ್ಮನಿದ್ದೀರಿ ಎಂದು ಆಕ್ರೋಶದಿಂದ ಜಾಡಿಸಿದರು. 6 ಎಕರೆ ಜಾಗವಿದೆ ಎಂದಾಗ ಎರ್ರಾ ಬಿರ್ರಿ ಗಣಿಗಾರಿಕೆ ಮಾಡಬಹುದಾ ? ಕಾನೂನು ಬದ್ದವಾದರೆ ಯಾಕೆ ಓಡಿಹೋಗಬೇಕು ,ಇದರಲ್ಲಿ ಎಲ್ಲಾ ಅಧಿಕಾರಿಗಳು ಶಾಮೀಲಾಗಿದ್ದಾರೆ ,ಎಂದು ಲೋಕಾಯುಕ್ತರು ವಾಹನ ಸಹಿತ ಎಲ್ಲ ವಸ್ತುಗಳನ್ನು ಜಪ್ತಿಮಾಡಲು ಮೂಡಬಿದರೆ ಇನ್ಸ್ಪೆಕ್ಟರ್ ರವರಿಗೆ ನಿರ್ದೇಶನ ನೀಡಿದ್ದಾರೆ.ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ತುಂಬಿ ತುಳುಕುತ್ತಿದ್ದು ಮೊನ್ನೆ ನಡೆದ ದೂರಿನಲ್ಲಿ ಸಾಬೀತಾಗಿದೆ ಎಂದು ತಿಳಿದಿದೆ.