ಮಂಗಳೂರು : ಮಾಜಿ ಸಚಿವರಾದ ಕೃಷ್ಣ.ಜೆ .ಪಾಲೆಮಾರ್ ರವರು ಅರ್ಪಿಸುವ ಸೆವೆಂಟಿ ಸೆವೆನ್ ಸ್ಟುಡಿಯೊಸ್ ರಾಘವೇಂದ್ರ ಕುಡ್ವ ರವರು ನಿರ್ಮಾಣದ ಬಹುನಿರೀಕ್ಷಿತ ”ದಸ್ಕತ್” ತುಳು ಸಿನಿಮಾ ಡಿಸೆಂಬರ್ 13 ರಂದು ತೆರೆಕಾಣಲಿದೆ. ಮೊದಲನೆಯ ದಿನವೇ ಪ್ರೇಕ್ಷಕರಿಗೆ ಚಿತ್ರತಂಡ ತುಳು ಸಿನಿಮಾಗಳನ್ನು ಪ್ರೋತ್ಸಾಹಿಸಲು ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಟಿಕೆಟ್ ದರವನ್ನು ಕೇವಲ 99 ರೂಪಾಯಿಯಂತೆ ಆಫರ್ ನೀಡಿದೆ.
”ದಸ್ಕತ್” ತುಳು ಚಲನ ಚಿತ್ರ ಕೆಲಸ ಪೂರ್ಣಗೊಂಡಿದ್ದು ಡಿಸೆಂಬರ್ 13 ರಂದು ಬಿಡುಗಡೆಗೊಳ್ಳಲಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನಿಶ್ ಪೂಜಾರಿ ವೇಣೂರು,ಈ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆಯವರು ಛಾಯಾಗ್ರಹಣ ಮಾಡಿದ್ದು,ಗಣೇಶ್ ನೀರ್ಚಾಲ್ ರವರು ಸಂಕಲನ ಮಾಡಿದ್ದಾರೆ. ಸಮರ್ಥನ್ ಯಸ್.ರಾವ್ ಸಂಗೀತ ನೀಡಿದ್ದು, ದೀಕ್ಷಿತ್ ಅಂಡಿಂಜೆ, ಚಂದ್ರಹಾಸ್ ಉಳ್ಳಾಲ್, ಯುವ ಶೆಟ್ಟಿ ,ಮೋಹನ್ ಶೇಣಿ,ದೀಪಕ್ ರೈ ಪಾಣಾಜೆ,ನೀರಜ್ ಕುಂಜರ್ಪ,ಮಿಥುನ್ ರಾಜ್,ತಿಮ್ಮಪ್ಪ ಕುಲಾಲ್, ಯೋಗೀಶ್ ಶೆಟ್ಟಿ, ಚೇತನ್ ಪಿಲಾರ್ ,ಹೀಗೆ ಇನ್ನೂ ಅನೇಕ ಯುವ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ನಾಯಕಿಯ ಪಾತ್ರದಲ್ಲಿ ಭವ್ಯ ಪೂಜಾರಿ ನಟಿಸಿದ್ದು ಚಲನ ಚಿತ್ರವೂ ಭೋದಿ ಪ್ರೊಡಕ್ಷನ್ ಸಹಯೋಗದೊಂದಿಗೆ ಮೂಡಿಬಂದಿದೆ.ತಂಡದಲ್ಲಿ ಸ್ಮಿತೇಶ್ ಬಾರ್ಯ,ವಿನೋದ್ ರಾಜ್ ಕಳ್ಮಂಜ ,ನಿಶಿತ್ ಶೆಟ್ಟಿ ,ದೀಕ್ಷಿತ್ ಧರ್ಮಸ್ಥಳ,ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.
ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತುಳು ಚಿತ್ರರಂಗದ ನಟ ಅರ್ಜುನ್ ಕಾಪಿಕಾಡ್ ಇದೊಂದು ವಿಭಿನ್ನ ಶೈಲಿಯ ಕಥೆಯಾಗಿದೆ ಎಂದು ಹೇಳಿದ್ದಾರೆ.ತುಳುನಾಡಿನ ಜನರೆಲ್ಲಾ ತುಳು ಸಿನಿಮಾವನ್ನು ಚಿತ್ರ ಮಂದಿರಕ್ಕೆ ಬಂದು ನೋಡಿ ಪ್ರೋತ್ಸಾಹಿಸಬೇಕೆಂದು ವಿನಂತಿಮಾಡಿದ್ದಾರೆ. ಹಾಗೂ ತುಳು ಚಿತ್ರ ನಿರ್ಮಾಪಕ ಸಚಿನ್ ಉಪ್ಪಿನಂಗಡಿ ಯವರು ಮಾತನಾಡಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೊಂದು ತುಳುವರ ಬದುಕು,ಸಂಸೃತಿ ,ಸಂಘರ್ಷದ ಕಥಾನಕವೇ ಈ ದಸ್ಕತ್ ಎಂದು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ,ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಚಿನ್ ಉಪ್ಪಿನಂಗಡಿ,ರಾಹುಲ್ ಕುಡ್ವ,ಪ್ರಜ್ಞೆಶ್ ಶೇಟ್ಟಿ ,ದೀಕ್ಷಿತ್ ಅಂಡಿಂಜೆ ,ಭವ್ಯ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಒಳ್ಳೆಯ ತುಳು ಸಿನಿಮಾ ನೀಡಿದರೆ ಜನರು ಯಾವಾಗಲು ನಿಮ್ಮನ್ನು ಗೆಲ್ಲಿಸುತ್ತಾರೆ …all the best team daskath..
ತುಳು ಸಿನಿಮಾಕ್ಕೆ ಹಣ ಹಾಕಿದ ನಿರ್ಮಾಪಕರು ಎಲ್ಲ ಕಂಗಾಲಾಗಿದ್ದಾರೆ ,ಅದರಿಂದ ದಯಮಾಡಿ ನಿರ್ದೇಶಕರಿಗೆ ತುಳು ಜನರ ಹೃದಯ ಮುಟ್ಟುವಂಥಹ ಚಿತ್ರಗಳನ್ನು ನಿರ್ದೇಶಿಸಿ …ಅವಾಗ ಎಲ್ಲಾ ಕಲಾವಿದರು ಬೆಳೆಯುತ್ತಾರೆ ….ದಸ್ಕತ್ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ