ಮಂಗಳೂರು, ಜ.12: ಗಾಂಜಾ ದಂಧೆ ಮಾಡುತ್ತಿದ್ದ ಆರೋಪದ ಮೇಲೆ ಇನ್ನೂ ಮೂವರನ್ನು ಜನವರಿ 12 ರಂದು ಗುರುವಾರ ಬಂಧಿಸಲಾಗಿದೆ.
ಬಂಧಿತರನ್ನು ಕಸಬಾ ಬೆಂಗ್ರೆಯ ಮೊಹಮ್ಮದ್ ಅಫ್ರಾರ್ (23) ಎಂದು ಗುರುತಿಸಲಾಗಿದೆ. ಕೊಚ್ಚಿಯಿಂದ ಅಡೋನ್ ದೇವ್ ಮತ್ತು ತುಮಕೂರಿನ ಹರ್ಷಕುಮಾರ್ ವಿ ಎಸ್.
ಮೊಹಮ್ಮದ್ ಅಫ್ರಾರ್ ನಗರದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಡೋನ್ ದೇವ್ ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಫಾರ್ಮ ಡಿ ವ್ಯಾಸಂಗ ಮಾಡುತ್ತಿದ್ದಾನೆ. ಹರ್ಷ ಕುಮಾರ್ ಅಂತಿಮ ವರ್ಷದ ಪೆಥಾಲಜಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಜನವರಿ 11 ರಂದು ಗಾಂಜಾ ಮತ್ತು ಸೇವನೆ ಆರೋಪದ ಮೇಲೆ ವೈದ್ಯರು, ವೈದ್ಯಕೀಯ ಮತ್ತು ದಂತ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಜೊತೆಗೆ, ಮಂಗಳೂರಿನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದೇಶಿ ಪ್ರಜೆಯನ್ನು ಇದೇ ಆರೋಪದ ಮೇಲೆ ಜನವರಿ 8 ರಂದು ಬಂಧಿಸಲಾಯಿತು. ಸದ್ಯ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಸದ್ಯ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಗಾಂಜಾ ಕೇಸ್ನಲ್ಲಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್ಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ವೈದ್ಯರು, ವಿದ್ಯಾರ್ಥಿಗಳು KMC ಅತ್ತಾವರ, KMC ಮಣಿಪಾಲ ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜ್ನವರಾಗಿದ್ದಾರೆ. ಬಂಧಿತರಿಂದ 2 ಕೆಜಿ ಗಾಂಜಾ, ನಕಲಿ ಪಿಸ್ತೂಲ್, ಡ್ರ್ಯಾಗರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮುಖ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಶಾ (38). ಯು.ಕೆ ಪ್ರಜೆಯಾಗಿರೋ ಈತ ಸಾಗರೋತ್ತರ ಭಾರತೀಯ ಪ್ರಜೆ.
ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾದ ಅಡಿ ಮಂಗಳೂರಿನಲ್ಲಿ ಮೆಡಿಕಲ್ ಸೀಟ್ ಪಡೆದುಕೊಂಡಿದ್ದನು. ಡೆಂಟಲ್ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ವಿದ್ಯಬ್ಯಾಸ. ಫೇಲ್ ಆಗುತ್ತಾ ಇದ್ರು ಪದೇ ಪದೇ ಕಾಲೇಜಿನಲ್ಲಿ ಓದಿಕೊಂಡಿರೋ ಅಸಾಮಿ.
ವಿದ್ಯಬ್ಯಾಸದ ಸೋಗಿನಲ್ಲಿ ಗಂಜಾ ಗಿರಾಕಿಗಳಿಗೆ ತಲಾಶ್. ಗಾಂಜಾ, ಡ್ರಗ್ಸ್ ಕೊಟ್ಟು ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುತ್ತಿದ್ದ ನೀಲ್. ಬಂಟ್ಸ್ ಹಾಸ್ಟೆಲ್ ನಲ್ಲಿರೋ ತನ್ನ ಫ್ಲಾಟ್ ನಲ್ಲೇ ಮಾರಾಟ. ಫ್ಲಾಟನ್ನೇ ಮತ್ತಿನ ಸರಕು ತುಂಬಿಸೋ ಜಾಗವಾಗಿಸಿದ್ದ ನೀಲ್.
ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಗಾಂಜಾ ಡಾಕ್ಟರ್ಸ್ ಗಳಿಗೆ ಖಾಕಿ ಡ್ರಿಲ್. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮೆಂಡಿಸ್ ಪ್ಲಾಜಾ ಎಂಬಾ ಈ ಆಪಾರ್ಟ್ಮೆಂಟ್ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯಾದ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತ ವಾಸವಿದ್ದ. ಈತ ತನ್ನ ಪ್ಲಾಟ್ ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಾಂಜಾ ಮಾರುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಳಿಕ ಆತನ ಪ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ 2 ಕೆ,ಜಿ ಗಾಂಜಾ ಮತ್ತು ಒಂದು ನಕಲಿ ಪಿಸ್ತೂಲ್ ಹಾಗೂ ಒಂದು ಡ್ಯಾಗರ್ ಸಿಕ್ಕಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಡಾಕ್ಟರ್ಗಳ ಮುಖವಾಡ ಕಳಚಿಬಿದ್ದಿದೆ.
ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾ ಆಡಿಯಲ್ಲಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಬ್ಯಾಸ ಮಾಡುತ್ತಿರುವ ಮೆಂಡಿಸ್ ಪ್ಲಾಜಾ, ವೈದ್ಯರಿಗೂ ಗಾಂಜಾ ನೀಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧಾರದ ಮೇಲೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆ ವೈದ್ಯರಾದ ಡಾ.ಸಮೀರ್(32) ಮತ್ತು ಡಾ.ಮಣಿಮಾರನ್ ಮುತ್ತು (28) ಎನ್ನುವವರನ್ನು ಬಂಧಿಸಿದ್ದಾರೆ. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಕರಣದಲ್ಲಿ ತಗಲಾಕ್ಕೊಂಡಿದ್ದರು.
ಈ ಘಟನೆ ನಂತರ ಮಂಗಳೂರಿಗೆ ಮೆಡಿಕಲ್ ವಿದ್ಯಬ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಚಿಂತೆ ಆರಂಭವಾಗಿದೆ. ಮತ್ತಿನಲ್ಲಿ ಅದೆಂಥಾ ಚಿಕಿತ್ಸೆ ಕೊಡುತ್ತಾರೆ ಎನ್ನುವ ಆತಂಕದಲ್ಲಿ ರೋಗಿಗಳಿದ್ದಾರೆ. ತನಿಖೆ ಬಳಿಕ ಇನ್ನೂ ಯಾವೆಲ್ಲ ವಿಚಾರ ಹೊರಬರುತ್ತವೆ ಎಂದು ಕಾದು ನೋಡಬೇಕಿದೆ.
ತಡರಾತ್ರಿವರೆಗೂ ವಿಚಾರಣೆ ನಡೆಸಿದ ಮಂಗಳೂರು ಪೊಲೀಸರು.
ತನಿಖೆ ವೇಳೆ ಇನ್ನು ಕೆಲವು ಜನರ ಹೆಸರು ಹೇಳಿದ ಆರೋಪಿ . ಪೆಡ್ಲರ್ ನೀಲ್ ಹೇಳಿದ ಮಾಹಿತಿ ಮೇರೆ ಪೊಲೀಸರ ತನಿಖೆ.
ಇನ್ನು ಮೂರ್ನಾಲ್ಕು ಕಾಲೇಜುಗಳ ಹೆಸರು ಹೇಳಿರೋ ನೀಲ್. ತಡರಾತ್ರಿ ಪೊಲೀಸರ ಕಾರ್ಯಾಚರಣೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನ. ಕೆಲ ಕಾಲೇಜುಗಳಿಗೆ ವಿದ್ಯಾರ್ಥಿಗಳ ಮೇಲೆ ಎಫ್.ಐ.ಆರ್ ಮಾಡಿಕೊಂಡು ತಲಾಶ್.
ಗಾಂಜಾದ ಹೆಸರಲ್ಲಿ ಸೆಕ್ಸ್ , ಲೀವಿಂಗ್ ರಿಲೇಷನ್ಶಿಪ್
ಅಮಲು ಹೊಡೆದ ಮೇಲೆ ಎಲ್ಲ ಹುಡುಗ ಹುಡುಗಿಯರು ಜೊತೆಯಲ್ಲಿ ವಾಸ . ಲಿವಿಂಗ್ ಟುಗೆದರ್ ನಿಂದ ಡೈರೆಕ್ಟ್ ಮತ್ತಿನ ಲೋಕಕ್ಕೆ. ಪಿಜಿ, ಹಾಸ್ಟೆಲ್ ಬಿಟ್ಟು ಅಪಾರ್ಟ್ಮೆಂಟ್ ವಾಸ. ತಮ್ಮ ಬಾಯ್ ಫ್ರೆಂಡ್ ಗಳ ಜೊತೆ ಅಪಾರ್ಟ್ಮೆಂಟ್ ನಲ್ಲಿ ವಾಸ. ಅಪಾರ್ಟ್ಮೆಂಟ್ ನಲ್ಲಿ ಲೀವಿಂಗ್ ಟುಗೆದರ್ ಹೆಸರಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಾಸ. ಅಲ್ಲಿ ಬಾಯ್ ಫ್ರೆಂಡ್ ಗಳಿಂದ ಗಾಂಜಾ ರುಚಿ. ಗರ್ಲ್ ಫ್ರೆಂಡ್ ಗಳಿಗೆ ಗಾಂಜಾ ರುಚಿ ತೋರಿಸಿದ್ದ ಬಾಯ್ ಫ್ರೆಂಡ್ ಗಳ ಸೆಕ್ಸ್.