ಕಾಸರಗೋಡು : 19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಡಿವೈಎಸ್ಪಿ ಎ ಸತೀಶ್ ನೇತೃತ್ವದಲ್ಲಿ ಕ್ರೈಂ ಬ್ರಾಂಚ್ ತಂಡ ಕಾರ್ಯಚರಣೆ ನಡೆಸಿದೆ.
ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಣ್ಮಕಜೆ ಮೂಲದ ಬೀಫಾತಿಮಾ (42), ಉದುಮ ಮೂಲದ ಫಯಾಸ್ ಮೊಯ್ದೀನ್ ಕುಂಞಿ (29) ಮತ್ತು ಮಾಂಗಾಡ್ ಮೂಲದ ಎನ್ ಮುನೀರ್ (29) ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ.
ದೂರಿನಲ್ಲಿ ಬಾಲಕಿ ಅಮಲಿನಲ್ಲಿ ಕುಟುಂಬದ ಆರ್ಥಿಕ ಹಿನ್ನಡೆಯ ಲಾಭ ಪಡೆದು ಆರೋಪಿ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಎಂದು ದೂರಿನಲ್ಲಿ ದಾಖಲಾಗಿದೆ .
ಆಸ್ಪತ್ರೆಯಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಬಾಲಕಿ ಆಘಾತಕಾರಿ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾಳೆ. ದೈಹಿಕ ಮತ್ತು ಮಾನಸಿಕವಾಗಿ ದೂರು ನೀಡಿದ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಕನಿಷ್ಠ 18 ಆರೋಪಿಗಳು ಭಾಗಿಯಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.