ಬೆಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ವಾಟ್ಸ್ಆ್ಯಪ್ ನಲ್ಲಿ ಅನೇಕ ಕರೆಗಳು ಬರುತಿದ್ದು ಅದರಲ್ಲಿ ಫೇಕ್ ಕರೆಗಳೇ ಹೆಚ್ಚಾಗಿದೆ.ಸ್ಮಾರ್ಟ್ಫೋನ್ ಬಳಕೆದಾರರು ಸಾಮಾನ್ಯ ಕರೆಗಳಂತೆಯೇ ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೆ,ಅದು ಹೇಗೆ ಎಂಬುದು ತಿಳಿದಿಲ್ಲ. ನೀವು ವಾಟ್ಸ್ಆ್ಯಪ್ ನಲ್ಲಿ ಸುಲಭವಾಗಿ ಕರೆಗಳನ್ನು ರೆಕಾರ್ಡ್ ಮಾಡಬಹುದು.
2009ರಲ್ಲಿ ಪ್ರಾರಂಭವಾದ ವಾಟ್ಸ್ಆ್ಯಪ್ ಕಾಲಾನಂತರದಲ್ಲಿ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇಂದು ಸುಮಾರು ಶೇ. 99 ಮೊಬೈಲ್ ಬಳಕೆದಾರರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸುತ್ತಾರೆ. ಕೆಲಸ, ಚಾಟ್‌ಗಳು ಅಥವಾ ಕೆಲವು ಯೋಜನೆಗಳಿಗಾಗಿ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸ್ಆ್ಯಪ್ ಅತ್ಯಂತ ಅಗತ್ಯವಾದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆಗಿದೆ. ಒಬ್ಬರ ದೈನಂದಿನ ಕೆಲಸವನ್ನು ಸುಲಭಗೊಳಿಸಲು ಈ ಸಾಮಾಜಿಕ ಜಾಲತಾಣವು ತುಂಬಾ ಉಪಯುಕ್ತವಾಗಿದೆ. ಆದರೆ, ಇದರಲ್ಲಿ ಕರೆಗಳನ್ನು ರೆಕಾರ್ಡ್ ಮಾಡಬಹುದು ಎಂದು ಅನೇಕರಿಗೆ ತಿಳಿದಿಲ್ಲ.
ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?
ಸ್ಮಾರ್ಟ್ಫೋನ್ ಬಳಕೆದಾರರು ಸಾಮಾನ್ಯ ಕರೆಗಳಂತೆಯೇ ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೆ, ಅದು ಹೇಗೆ ಎಂಬುದು ತಿಳಿದಿಲ್ಲ. ನೀವು ವಾಟ್ಸ್ಆ್ಯಪ್ನಲ್ಲಿ ಸುಲಭವಾಗಿ ಕರೆಗಳನ್ನು ರೆಕಾರ್ಡ್ ಮಾಡಬಹುದು. ಅದು ಹೇಗೆ ಎಂಬುದನ್ನು ನೋಡೋಣ.
ಮೊದಲನೆಯದಾಗಿ, ವಾಟ್ಸ್ಆ್ಯಪ್ನಲ್ಲಿ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ವೈಶಿಷ್ಟ್ಯವಿಲ್ಲ ಎಂಬುದು ತಿಳಿದುಕೊಳ್ಳಿ. ಅಂದರೆ, ವಾಟ್ಸ್ಆ್ಯಪ್ ಯಾವುದೇ ಕರೆ ರೆಕಾರ್ಡಿಂಗ್ ಆಯ್ಕೆಯನ್ನು ನೀಡಿಲ್ಲ, ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕರೆಗಳನ್ನು ರೆಕಾರ್ಡ್ ಮಾಡಬಹುದು.
ಇದಕ್ಕಾಗಿ ಒಟ್ಟು 3 ಅಪ್ಲಿಕೇಶನ್‌ಗಳಿವೆ. ಆ ಆ್ಯಪ್‌ಗಳೆಂದರೆ ಕ್ಯೂಬ್ ಎಸಿಆರ್, ಸೇಲೆಸ್ಟ್ರೈಲ್ ಮತ್ತು ಎಸಿಆರ್ ಕಾಲ್ ರೆಕಾರ್ಡರ್. ಎಸಿಆರ್ ಕಾಲ್ ರೆಕಾರ್ಡರ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ತುಂಬಾ ಸರಳವಾದ ಅಪ್ಲಿಕೇಶನ್ ಆಗಿದೆ. ಎರಡನೇ ಸಾಲಿಟ್ರೈಲ್ ಪ್ರೀಮಿಯಂ ವೈಶಿಷ್ಟ್ಯದೊಂದಿಗೆ ಈ ಸೇವೆಯನ್ನು ನೀಡುತ್ತದೆ. ಅಂತೆಯೇ, ನೀವು ಕ್ಯೂಬ್ ಎಸಿಆರ್ ಮೂಲಕ ಸುಲಭವಾಗಿ ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಬಹುದು.
ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?
- ಗೂಗಲ್ ಪ್ಲೇ ಸ್ಟೋರ್ನಿಂದ Cube ACR, Sales trail ಅಥವಾ AC. ACR ಕಾಲ್ ರೆಕಾರ್ಡರ್‌ನಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
- ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್ ಸ್ಟಾಲ್ ಮಾಡಿದ ನಂತರ, ಅಪ್ಲಿಕೇಶನ್‌ಗೆ ಅಗತ್ಯ ಅನುಮತಿಗಳನ್ನು ನೀಡಿ.
- ಕೆಲವು ಅಪ್ಲಿಕೇಶನ್‌ಗಳಲ್ಲಿ, ನೀವು ಕರೆ ರೆಕಾರ್ಡಿಂಗ್ ಅನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬೇಕಾಗಬಹುದು.
- ವಾಟ್ಸ್ಆ್ಯಪ್ ಕರೆ ಪ್ರಾರಂಭವಾದ ತಕ್ಷಣ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ರೆಕಾರ್ಡಿಂಗ್ ಪ್ರಾರಂಭಿಸುತ್ತವೆ.
- ಕರೆ ಮುಗಿದ ನಂತರ, ನೀವು ಆ ಕಾಲ್ ರೆಕಾರ್ಡ್ ಆ್ಯಪ್ ತೆಗೆದು ರೆಕಾರ್ಡಿಂಗ್ ಅನ್ನು ಆಲಿಸಬಹುದು.
- ಇವುಗಳ ಜೊತೆಗೆ Otter.Ai app ಕೂಡ ವಾಯ್ಸ್ ರೆಕಾರ್ಡ್ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.
ವಾಟ್ಸ್ಆ್ಯಪ್ನಲ್ಲಿ ವಾಯ್ಸ್ ಕಾಲ್‌ನಂತೆಯೇ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಬಹುದು. ಇದಕ್ಕೆ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಡಿಯು ರೆಕಾರ್ಡರ್ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್ ರೆಕಾರ್ಡರ್ ಆಪ್ ಆಗಿದೆ. ಈ ಆ್ಯಪ್ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು, ಸ್ಕ್ರೀನ್ ಮೇಲಿನ ಪ್ಲೋಟಿಂಗ್ ಐಕಾನ್ ಮೂಲಕ ಸ್ಕ್ರೀನ್ ರೆಕಾರ್ಡ್ ಮಾಡಬಹುದಾಗಿದೆ.