ಹಾಸನ : ಬೆಳಿಗ್ಗೆಯಿಂದ ಸಿಕ್ಕಸಿಕ್ಕವರ ಮೇಲೆ ಹೆಣ್ಣಾನೆ ದಾಳಿ ಮಾಡುತ್ತಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಮುವ್ವಾಲ ಗ್ರಾಮದಲ್ಲಿ ನಡೆದಿದೆ.
ಗುಂಪಿನಿಂದ ಬೇರ್ಪಟ್ಟಿದ್ದರಿಂದ ಕಾಡಾನೆ ರೊಚ್ಚಿಗೆದ್ದಿದ್ದು ಕಳೆದ ಒಂದು ದಿನದ ಹಿಂದೆ ಓಲ್ಡ್ ಬೆಲ್ಟ್‌ನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು.ಬೆಳಿಗ್ಗೆ ಐವರ ಮೇಲೆ ಕಾಡಾನೆ ದಾಳಿ ಮಾಡಿದ್ದು ಈ ಬಗ್ಗೆ ಸ್ಥಳೀಯರು ಭಯಬೀತರಾಗಿದ್ದರು.
ಕಾಡಾನೆ ಚಲನವಲನ ಗಮನಿಸಿ ಇಟಿಎಫ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದು, ಯಾವುದೇ ಅನಾಹುತವಾಗದಂತೆ ಹೆಣ್ಣಾನೆ ಹಿಂದೆ ಅರಣ್ಯ ಇಲಾಖೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಬೆನ್ನುಬಿದ್ದಿದ್ದರು.ಕಾಡಿಗೆ ಹಟ್ಟಾಡಿಸಲು ಪ್ರಯತ್ನ ಪಡುತ್ತಿದ್ದು ಈ ವೇಳೆ ಜೀಪ್ ರಿವರ್ಸ್ ತೆಗೆದು ಪ್ರಾಣ ಅರಣ್ಯ ಇಲಾಖೆಯ ಉಳಿಸಿಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಇದ್ದ ಜೀಪ್ ಮೇಲೆ ಕಾಡಾನೆ ದಾಳಿ ಮಾಡಿದೆ. ಕೂಡಲೇ ಜೀಪ್ ಹತ್ತಿದ ಇಟಿಎಫ್ ಸಿಬ್ಬಂದಿ
ಕೆಲ ದೂರು ರಿವರ್ಸ್ ಚಲಿಸಿ ಪ್ರಾಣ ಉಳಿಸಿಕೊಂಡಿದ್ದಾರೆ.