ಹಾಸನ : ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಚಿಕ್ಕಂದೂರು ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾ ಸಂಪೂರ್ಣ ನಾಶಪಡಿಸಿರುವ ಘಟನೆ ನಡೆದಿದೆ.
ಗ್ರಾಮದ ಚಿನ್ನಪ್ಪ ಹಾಗೂ ಇತರೆ ರೈತರಿಗೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಪೈರನ್ನುತುಳಿದು, ತಿಂದು ಕಾಡಾನೆಗಳ ಹಿಂಡು ನಾಶ ಮಾಡಿದೆ.ಗದ್ದೆಗಳ ಪಕ್ಕದ ಕಾಫಿ ತೋಟದಲ್ಲಿ ಗಜಪಡೆಗಳು ಬೀಡುಬಿಟ್ಟಿದ್ದು ಬೆಳೆ ಕಳೆದುಕೊಂಡು ಅನ್ನದಾತರು ಕಂಗಾಲಾದ್ದಾರೆ.ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದು ಉಳಿದ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಒತ್ತಾಯಿಸಿದ್ದು,ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.