Saturday, February 14, 2026
Flats for sale
Homeರಾಜ್ಯಕೊಪ್ಪಳ ; ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸದ್ಗುರು ಜಗ್ಗಿ ವಾಸುದೇವ ರವರಿಂದ ಉದ್ಘಾಟನೆ.

ಕೊಪ್ಪಳ ; ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸದ್ಗುರು ಜಗ್ಗಿ ವಾಸುದೇವ ರವರಿಂದ ಉದ್ಘಾಟನೆ.

ಕೊಪ್ಪಳ ; ಜನವರಿ 8 ರಂದು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವವನ್ನು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಉದ್ಘಾಟಿಸಲಿದ್ದಾರೆ.

ಸದ್ಗುರುಗಳು ಉದ್ಘಾಟನೆಯ ನಂತರ ಕೈಲಾಸ ಮಂಟಪದಲ್ಲಿ ಆಧ್ಯಾತ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ ಎಂದು ಗವಿಮಠದ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೊಳ್ಳೆಗಳ ತಡೆಗೆ ರಾಸಾಯನಿಕ ಬಳಕೆ ಹಾಗೂ ಸಂಚಾರಿ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

ಜಾತ್ರಾ ಅಂಗವಾಗಿ ಮಹಾ ದಾಸೋಹದಲ್ಲಿ ಆಹಾರದ ಗುಣಮಟ್ಟ ಪರೀಕ್ಷಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

ಅಲ್ಲದೇ ಭದ್ರತೆ ಒದಗಿಸುವಂತೆ ಸಿಎಂಸಿ ಹಾಗೂ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular