ಮುಂಬೈ : ಮತದಾನ ಮುಗಿದದ್ದೇ ತಡ, ಮಹಾರಾಷ್ಟ್ರದ ಮಹಾವಿಕಾಸ್ ಆಘಾಡಿ ಗಾಡಿಯಲ್ಲಿ ಸಿಎಂ ಸೀಟಿಗಾಗಿ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ನೇತೃತ್ವದಲ್ಲೇ ಸರ್ಕಾರ ರಚನೆಯಾಗುತ್ತದೆಂದು' ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಆದರೆ
ಪಟೋಲೆ ಮಾತನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದಿರುವ ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಬಹಿರಂಗವಾಗೇ ಆಕ್ರೋಶ ಹೊರಹಾಕಿದ್ದಾರೆ.
ಮರಾಠಿ ನಾಡು ಮಹಾರಾಷ್ಟ್ರದ ಗದ್ದುಗೆ ಹಿಡಿಯುವ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಶಿವಸೇನಾ(ಉದ್ಧವ್ ಬಣ) ಪಕ್ಷಗಳು ಸಹಮತ ವ್ಯಕ್ತಪಡಿಸಿವೆಯಾದರೂ ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಕಿತ್ತಾಟಕ್ಕಿಳಿದಿವೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬರುವ ಕುರಿತು ಅಂದಾಜಿಸಿದ ಬೆನ್ನಲ್ಲೇ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಮಹಾರಾಷ್ಟçದಲ್ಲಿ ಮಹಾವಿಕಾಸ್ ಆಘಾಡಿ ಸರ್ಕಾರವೇ ರಚನೆಯಾಗುತ್ತದೆ. ಕಾಂಗ್ರೆಸ್ ಆ ಸರ್ಕಾರದ ನೇತೃತ್ವದ ವಹಿಸುತ್ತದೆ’ ಎಂದು ಹೇಳಿದ್ದಾರೆ. ಆ ಮೂಲಕ ನಾನೇ ಸಿಎಂ ಎಂದು ಬಿಂಬಿಸಿಕೊAಡಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ ಆಪ್ತ ಹಾಗೂ ಶಿವಸೇನಾ ಸಂಸದ ಸಂಜಯ್ ರಾವತ್, ಪಟೋಲೆ ಮಾತನ್ನು ನಾನು ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಇದನ್ನು ಬೇರೆ ಯಾರೂ (ಆಘಾಡಿ ಇತರ ನಾಯಕರು) ಒಪ್ಪುವುದಿಲ್ಲ. ಕಾಂಗ್ರೆಸ್ ನೇತೃತ್ವದಲ್ಲೇ ಸರ್ಕಾರ ರಚನೆಯಾಗುತ್ತದೆ ಎಂಬ ಮಾತನ್ನು ಸ್ವತಃ ಪಟೋಲೆ ಅವರೇ ಹೇಳಿದ್ದಾರಾ ಅಥವಾ ಆ ಮಾತಿನ ಹಿಂದೆ ಕೈ ಹೈಕಮಾಂಡ್‌ನ ಆದೇಶವಿದೆಯಾ ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.
ಮಹಾರಾಷ್ಟçದಲ್ಲಿ ಕಾಂಗ್ರೆಸ್ ಹಾಗೂ ಉದ್ಧವ್ ಬಣದ ಮಧ್ಯೆ ಗುದ್ದಾಟ, ಕಿತ್ತಾಟಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಚುನಾವಣೆ ಪೂರ್ವದಲ್ಲಿ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲೂ ಹಲವಾರು ಭಿನ್ನಾಭಿಪ್ರಾಯಗಳು ಮೇಲೆದ್ದು ಬಂದಿದ್ದವು. ಆಗಲೂ ಮಹಾವಿಕಾಸ್ ಆಘಾಡಿಯಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗುವ ಲಕ್ಷಣಗಳು ಕಣ್ಣಿಗೆ ರಾಚುತ್ತಿದ್ದವು. ಆದರೆ ಕೊನೆ ಕ್ಷಣದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಚುನಾವಣೆ ಎದುರಿಸಲಾಗಿತ್ತು. ಈಗ ಮತ್ತೆ ಆ ಆಂತರಿಕ ಘರ್ಷಣೆ ಸಿಎಂ ಕುರ್ಚಿಯ ಹೆಸರಿನಲ್ಲಿ ಮುನ್ನೆಲೆಗೆ
ಬಂದಿದೆ. ಆಘಾಡಿ ಗಾಡಿಗೆ ಮಹಾರಾಷ್ಟçದಲ್ಲಿ ಸೂಕ್ತ ಸಾರಥಿ ಇಲ್ಲದಿರುವುದೇ ಸದ್ಯಕ್ಕೆ ಎದ್ದಿರುವ ಗೊಂದಲ, ಗಲಾಟೆ ಹಾಗೂ ಟಾಕ್ ವಾರ್‌ಗೆ ಕಾರಣ ಎನ್ನಲಾಗುತ್ತಿದೆ.