Sunday, July 13, 2025
Flats for sale
Homeಜಿಲ್ಲೆಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮಕ್ಕೆ ಡ್ರಗ್ಸ್ ಸಾಗಾಟ.ಕೊಣಾಜೆ ಪೊಲೀಸರ ಕಾರ್ಯಾಚರಣೆ ನಾಲ್ವರ ಬಂಧನ.

ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮಕ್ಕೆ ಡ್ರಗ್ಸ್ ಸಾಗಾಟ.ಕೊಣಾಜೆ ಪೊಲೀಸರ ಕಾರ್ಯಾಚರಣೆ ನಾಲ್ವರ ಬಂಧನ.

ಉಳ್ಳಾಲ : ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್ ಡಿಎಮ್ ಎ ಮತ್ತು ಗಾಂಜವನ್ನ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಬೆಂಗಳೂರಿಂದ ನರಿಂಗಾನ ಗ್ರಾಮದ ತೌಡುಗೋಳಿಗೆ ಗಾಂಜಾ ಮತ್ತು ಎಮ್ ಡಿಎಮ್ ಎ ಮಾದಕ‌ ವಸ್ತುವನ್ನ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಸೈ ಶರಣಪ್ಪ ತಂಡವು ನಿನ್ನೆ ರಾತ್ರಿ ಬೊಳಿಯಾರ್ ನಲ್ಲಿ ದಾಳಿ ನಡೆಸಿ ನಿಷೇದಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಅಲ್ಟೊ ಕಾರ್ ಸಮೇತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43 ) ಅಡ್ಯಾರ್ ಕಟ್ಟೆ,ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್ ,ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು.

ಬಂಧಿತರಿಂದ 2,10,000 ಮೌಲ್ಯದ ನಿಷೇದಿತ 4 ಕೆ.ಜಿ ಗಾಂಜಾ,40ಗ್ರಾಂ.ಎಮ್ ಡಿಎಮ್ ಎ ಮತ್ತು 2 ಲಕ್ಷ ಮೌಲ್ಯದ ಆಲ್ಟೊ ಕಾರನ್ನ ವಶ ಪಡಿಸಲಾಗಿದೆ.

ಕೊಣಾಜೆ ಠಾಣಾ ಪಿ.ಎಸ್ಸೈ ಶರಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್,ಪುರುಷೋತ್ತಮ್,ಶೈಲೇಂದ್ರ,ದೀಪಕ್,ಸುರೇಶ್ ,ಹೇಮಂತ್,ಗೌಸ್ ಅನಿಲ್,ಚಂದ್ರಕಾಂತ್,ಬರಮ ಬಡಿಗೇರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular