Friday, November 22, 2024
Flats for sale
Homeಜಿಲ್ಲೆದ‌.ಕ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ ; ಶರಣ್ ಪಂಪ್ ವೆಲ್

ದ‌.ಕ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ ; ಶರಣ್ ಪಂಪ್ ವೆಲ್

ಉಳ್ಳಾಲ ; ಪ್ರವೀಣ್ ನೆಟ್ಟಾರು ಮಾತ್ರವಲ್ಲ ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರಿತ್ತು ಅಂತ ಎನ್ಐಎ ಹೇಳಿದೆ , ಪಿಎಫ್ ಐ ಬ್ಯಾನ್ ಆಗಿದ್ರೂ ಅವರ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ. ಇನ್ನಷ್ಟು ನಮ್ಮ ಕಾರ್ಯಕರ್ತರ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ , ಆದರೆ ನಾನು ಆ ಜಿಹಾದ್ ನಾಯಿಗಳಿಗೆ ಎಚ್ಚರಿಕೆ ಕೊಡ್ತಾ ಇದೇನೆ, ಇನ್ನು ಮುಂದೆ ನಮ್ಮ ಕಾರ್ಯಕರ್ತರ ಹತ್ಯೆಯಾದ್ರೆ ಒಂದಕ್ಕೆ ಒಂದಲ್ಲ, ಎರಡಾಗುತ್ತೆ, ಮೂರಾಗುತ್ತೆ ನಮ್ಮ ಕಾರ್ಯಕರ್ತರ ಮೇಲೆ ನೀವು ಹಲ್ಲೆ ಮಾಡಿದ್ರೆ ನಿಮ್ಮ ಹತ್ತು ಜನರನ್ನ ನಾವು ಆಸ್ಪತ್ರೆಗೆ ಸೇರಿಸ್ತೇವೆ ಎಂದು ಉಳ್ಳಾಲದ ಶೌರ್ಯ ಯಾತ್ರೆಯಲ್ಲಿ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಉಳ್ಳಾಲದಲ್ಲಿ ಚುನಾವಣೆಗೋಸ್ಕರ ನಾವು ಕಾರ್ಯಕ್ರಮ ‌ಮಾಡ್ತಿಲ್ಲ ಆದರೆ ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು , ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡ್ತಾ ಇದೀವಿ , ಈ ಹಿಂದೂ ಶಾಸಕ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ ‌ನಲ್ಲಾದ್ರೂ ನಮ್ಮ ಬೆಂಬಲ ಇದೆ.

ಉಳ್ಳಾಲದ ಹಿಂದೂ ಕಾಂಗ್ರೆಸ್ಸಿಗರು ಎಷ್ಟು ದಿನ ಗುಲಾಮನ ಕಾಲ ಕೆಳಗೆ ಇರ್ತೀರಿ,ನೀವು ತಾಕತ್ತಿದ್ರೆ ಒಬ್ಬ ಹಿಂದೂವನ್ನ ಶಾಸಕನಾಗಿ ಗೆಲ್ಲಿಸಿ
ಸಿದ್ದರಾಮಯ್ಯ ಜೀವನದ ಮೊದಲ ಸತ್ಯವನ್ನು ಮೊನ್ನೆ ಹೇಳಿದ್ರು , ದ.ಕ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗ್ತಿದೆ ಅಂತ ಸತ್ಯ ಹೇಳಿದ್ದಾರೆ.

ದ‌.ಕ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ,ನಮಗೆ ಹೆಮ್ಮೆ ಇದೆ, ಈ ಹಿಂದುತ್ವದ ಫ್ಯಾಕ್ಟರಿ ಯಲ್ಲಿ ನಾವು ದೇಶಕ್ಕೋಸ್ಕರ ಕೆಲಸ ಮಾಡ್ತಾ ಇದೀವಿ ,ಸಿದ್ದರಾಮಯ್ಯನವರೇ, ಕೇವಲ ದ.ಕ ಜಿಲ್ಲೆ ಅಲ್ಲ, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ

ಗುಜರಾತ್ ನಲ್ಲಿ ನಡೆದಿದ್ದು ನರಮೇಧ ಅಲ್ಲ, ಅದು ಹಿಂದೂಗಳ ಪರಾಕ್ರಮ
ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ,ಅಗತ್ಯ ಬಿದ್ರೆ ಭಜರಂಗದಳ ಹೋರಾಟ ಮಾಡುತ್ತೆ, ಕೆಲವೊಮ್ಮೆ ‌ನಾವು ನುಗ್ಗಿ ಹೊಡೀತಿವಿ

ಪ್ರಶಾಂತ್ ನೆಟ್ಟಾರು ‌ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು,ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು,ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ,ಸುರತ್ಕಲ್ ಗೆ‌ ಹೋಗಿ ನುಗ್ಗಿ ನುಗ್ಗಿ ಹೊಡೆದ್ರು, ಅದು ನಮ್ಮ ಶೌರ್ಯ ಸುರತ್ಕಲ್ ನಲ್ಲಿ ಹೊಡೆದ ವಿಡಿಯೋವನ್ನ ಎಲ್ಲರೂ ವಿಡಿಯೋದಲ್ಲಿ ನೋಡಿದ್ದೀರಾ ಎಂದು ಉಗ್ರವಾಗಿ ಮಾತನಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular