ಜಾರ್ಖಂಡ್ : ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ,ಅತ್ಯಾಚಾರ ,ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇದೆ ,ಇದಕ್ಕೆ ಮೂಲ ಕಾರಣ ಸಡಿಲವಾದ ಕಾನೂನು ,ಇಲ್ಲಿ ಲವ್ ಜಿಹಾದ್ ಗೆ ಬಲಿಯಾದವರ ಸಂಖ್ಯೆ ದಿನೇ ದಿನ ಜಾಸ್ತಿ ಆಗ್ತಾನೆ ಇದೆ.

ದೆಹಲಿಯ ಶ್ರದ್ಧಾ ಕೊಲೆ ಕೇಸ್ ಬಗ್ಗೆ ದೇಶಾದ್ಯಂತ ಆಕ್ರೋಶ ಇರುವಾಗಲೇ ದೇಹವನ್ನ ಎಲೆಕ್ಟ್ರಿಕ್ ಕಟರ್‌ನಿಂದ 50ಕ್ಕೂ ಅಧಿಕ ಪೀಸ್ ಮಾಡಿ ಆಕೆಯನ್ನು 50 ಪೀಸ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ.
ಭೀಕರವಾಗಿ ಕೊಲೆಯಾದವಳು 22 ವರ್ಷದ ರುಬಿಕಾ ಪಹಾಡಿನ್ ಎಂದು ತಿಳಿಯಲಾಗಿದೆ . ಕೆಲವು ವರ್ಷಗಳಿಂದ ರುಬಿಕಾ ಹಾಗೂ ದಿಲ್ದಾರ್ ಪ್ರೀತಿ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಅವರು ವಿವಾಹ ವಾಗಿದ್ದರು . ಇದು ದಿಲ್ಡಾರ್ಗೆ 2ನೇ ಮದುವೆಯಾಗಿತ್ತು. ಈ ವಿಚಾರದಲ್ಲಿ ದಿಲ್ಡಾರ್ ಹಾಗೂ ರುಬಿಕಾ ನಡುವೆ ಪ್ರತಿ ದಿನವೂ ಗಲಾಟೆ ನಡೆಯುತ್ತಿತ್ತು.
ಪೋಲೀಸರ ಮಾಹಿತಿ ಪ್ರಕಾರ ಅಮಾನೀಯ ರೀತಿಯ ಈ ಕೃತ್ಯ ಶುಕ್ರವಾರ ರುಬಿಕಾಳನ್ನು ದಿಲ್ದಾರ್ ಕತ್ತು ಸೀಳಿ ಕೊಲೆ ಮಾಡಿದ್ದ ಎಂದು ಹೇಳಲಾಗುತ್ತಿದೆ, ದಿಲ್ದಾರ್‌ನ ತಾಯಿಯ ಸಂಬಂಧಿಯ ಮನೆಯಲ್ಲಿ ರುಬಿಕಾ ಪಹಾಡಿನ್ ಶವ ಪತ್ತೆಯಾಗಿದೆ.ಪೊಲೀಸರು ಸಾಕಷ್ಟು ಶೋಧ ಕಾರ್ಯ ನಡೆಸಿದರೂ, 22 ವರ್ಷದ ರುಬಿಕಾಳ ತಲೆ ಮಾತ್ರ ಪತ್ತೆಯಾಗಿಲ್ಲ . ದೇಹದ ಕೆಲಪು ಪೀಸ್‌ಗಳನ್ನು ಪತ್ತೆ ಮಾಡಿದ್ದಾರೆ. ಆರೋಪಿ ದಿಲ್ದಾರ್ ಅನ್ಸಾರಿಯನ್ನು ಬೆಲಾ ಟೋಲಾದಲ್ಲಿ ಬಂಧನ ಮಾಡಿದ್ದಾರೆ. ಆತನ ಸುಳಿವಿನ ಮೇರೆಗೆ ಅಂಗನವಾಡಿ ಕೇಂದ್ರದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಮಂಜ್ ಟೋಲಾ ಎಂಬಲ್ಲಿ ಬೀಗ ಹಾಕಿದ ಮನೆಯೊಂದರಿಂದ ಮೃತದೇಹದ ಕೆಲವು ಪೀಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಶುಕ್ರವಾರ ರುಬಿಕಾಳನ್ನು ದಿಲ್ದಾರ್ ಕತ್ತು ಸೀಳಿ ಕೊಲೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಬಳಿಕ ಎಲೆಕ್ಟ್ರಿಕ್ ಕಟರ್ ಬಳಸಿ 50 ಪೀಸ್‌ಗಳನ್ನಾಗಿ ಮಾಡಿದ್ದಾನೆ, ಪೀಸ್ ಮಾಡಿದ ಮೃತದೇಹ ವನ್ನು ಗೋಣಿಚೀಲದಲ್ಲಿ ಕಟ್ಟಿ ಇಟ್ಟಿದನೆಂದು ಪೊಲೀಸರು ತಿಳಿಸಿದ್ದಾರೆ.
ಭಾಸ್ಕರ್ ಅವರ ವರದಿಯಂತೆ, ಸಂತ್ರಸ್ತೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಮನೆಯಲ್ಲಿ ಗೋಣಿಚೀಲದಲ್ಲಿ ಸಂಗ್ರಹಿಸಲಾಗಿದೆ. ನಂತರ ಆರೋಪಿಗಳು ಕೆಲವು ತುಣುಕುಗಳನ್ನು ಹತ್ತಿರದ ಪ್ರದೇಶಗಳಲ್ಲಿ ವಿಲೇವಾರಿ ಮಾಡಿದರು.
ದೇಹದ ಅಂಗಾಂಗಗಳನ್ನು ತಿನ್ನುತ್ತಿದ್ದ ನಾಯಿಗಳನ್ನು ಸ್ಥಳೀಯರು ಹಿಡಿದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ದಿಲ್ದಾರ್ ಅನ್ಸಾರಿ ಅವರ ಕುಟುಂಬದ ಸದಸ್ಯರು ಅಪರಾಧದಲ್ಲಿ ಭಾಗಿಯಾಗಿದ್ದಾರೆ.
ವರದಿಯ ಪ್ರಕಾರ, ಪೊಲೀಸರು ದಿಲ್ದಾರ್ ಅವರ ತಂದೆ ಮುಸ್ತಾಕಿಮ್ ಅನ್ಸಾರಿ, ತಾಯಿ ಮರ್ಯಮ್ ಖಾತೂನ್, ಮೊದಲ ಪತ್ನಿ ಗುಲೇರಾ, ಸಹೋದರಿ ಶೇರ್ಜಾ ಖಾತೂನ್, ಸಹೋದರರಾದ ಅಮೀರ್ ಅನ್ಸಾರಿ ಮತ್ತು ಮಹತಾಬ್ ಅನ್ಸಾರಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಂತ್ರಸ್ತೆ ರೂಬಿಕಾ ಪಹಡನ್ ಅವರನ್ನು ದಿಲ್ದಾರ್ ಅನ್ಸಾರಿ ಅವರ ತಾಯಿಯ ಚಿಕ್ಕಪ್ಪ ಮೊಯಿನುಲ್ ಅನ್ಸಾರಿ ಅವರ ಮನೆಯಲ್ಲಿ ಹತ್ಯೆ ಮಾಡಲಾಗಿದೆ. ರುಬಿಕಾಳನ್ನು ಕೊಂದ ನಂತರ ಆಕೆಯ ದೇಹವನ್ನು ಕಬ್ಬಿಣದ ಕತ್ತರಿಸುವ ಯಂತ್ರದಿಂದ ಕತ್ತರಿಸಲಾಯಿತು.
ಇಲ್ಲಿಯವರೆಗೆ, ಪೊಲೀಸರು ಬಲಿಪಶುವಿನ ಬೆರಳುಗಳು, ಭುಜಗಳು, ಕೆಳ ಬೆನ್ನು, ಶ್ವಾಸಕೋಶ, ಹೊಟ್ಟೆ, ಮುಂಗಾಲು ಮತ್ತು ಸೊಂಟವನ್ನು ವಶಪಡಿಸಿಕೊಂಡಿದ್ದಾರೆ.