ಬಂಟ್ವಾಳ : ಪಾಣೆಮಂಗಳೂರಿನ ಹಳೆ ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಗುರುವಾರ ಪತ್ತೆಯಾಗಿದೆ.
ತಾಲೂಕಿನ ಸಜಿಪ ನಿವಾಸಿ ರಾಜೇಶ್ ಪೂಜಾರಿ ಸ್ಥಾನಮನೆ (36) ಮೃತ ವ್ಯಕ್ತಿ.
ಗುರುವಾರ ಬೆಳಗ್ಗೆ ಪಾಣೆಮಂಗಳೂರು ಹಳೆ ಸೇತುವೆ ಮೇಲೆ ದ್ವಿಚಕ್ರ ವಾಹನ ಬಿದ್ದಿರುವುದು ಪತ್ತೆಯಾಗಿದೆ. ಸ್ಕೂಟರ್ ಅನ್ನು ಗಮನಿಸಿದ ಸಾರ್ವಜನಿಕರು ಠಾಣೆಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ಶೋಧ ನಡೆಸಿದಾಗ ರಾಜೇಶ್ ಪೂಜಾರಿಯ ಮೃತದೇಹ ಪತ್ತೆಯಾಗಿದೆ.
ಮುಳುಗು ತಜ್ಞ ಗೂಡಿನಬಳಿ ಇಕ್ಬಾಲ್, ಮಹಮ್ಮದ್, ಹ್ಯಾರಿಸ್ ಮತ್ತು ಇಬ್ರಾಹಿಂ ಕೆ ಶೋಧ ಕಾರ್ಯದಲ್ಲಿ ಸಹಾಯ ಮಾಡಿ ಶವವನ್ನು ನೀರಿನಿಂದ ಹೊರಕ್ಕೆ ತಂದರು.
ಬುಧವಾರ ರಾತ್ರಿ ರಾಜೇಶ್ ಪೂಜಾರಿ ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ನದಿಗೆ ಎಸೆದಿದ್ದರಿಂದ ಅವಘಡ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.