ಕಾಸರಗೋಡು, ಡಿ.27: ಹಾವೇರಿಯಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಪ್ಯಾಸೆಂಜರ್ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಜಿಲ್ಲೆಯ ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ಡಿ.27ರಂದು ನಡೆದಿದೆ.
ಕಾಸರಗೋಡು ನುಸ್ರತ್ ನಗರದ ನಿವಾಸಿಗಳಾದ ಮೊಹಮ್ಮದ್ (65) ಮತ್ತು ಅವರ ಪತ್ನಿ ಆಯಿಷಾ (62) ಮೃತ ದಂಪತಿ. ಮಹಮ್ಮದ್ ಅವರ ಪುತ್ರ ಸಿಯಾದ್, ಅವರ ಪತ್ನಿ ಸಜ್ಜಾ ಮತ್ತು ಮಕ್ಕಳಾದ ಮೊಹಮ್ಮದ್ ಮತ್ತು ಆಯಿಷಾ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವವನ್ನು ಹಂಗಳ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಘಟನೆ ವೇಳೆ ಕಾರು ಹುಬ್ಬಳ್ಳಿಗೆ ತೆರಳುತ್ತಿತ್ತು. ಅಪಘಾತದಲ್ಲಿ ಕಾರಿನ ಮುಂಭಾಗದ ಭಾಗಕ್ಕೆ ತೀವ್ರ ಹಾನಿಯಾಗಿದೆ. ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದವರನ್ನು ಎಳೆದು ಆಸ್ಪತ್ರೆಗೆ ದಾಖಲಿಸಿದರೂ ಮಹಮ್ಮದ್ ಮತ್ತು ಆಯಿಷಾ ಅವರ ಪ್ರಾಣ ಉಳಿಸಲಾಗಲಿಲ್ಲ.