Friday, November 22, 2024
Flats for sale
Homeಜಿಲ್ಲೆಮಂಗಳೂರು : ಹೆದ್ದಾರಿ ಕಮರಿಗೆ ಬಿದ್ದ ಸಿಮೆಂಟ್ ಟ್ರಕ್;ಅಗ್ನಿಶಾಮಕದಳ,ಸ್ಥಳೀಯರ ಹರಸಾಹಸ ಚಾಲಕನ ರಕ್ಷಣೆ.

ಮಂಗಳೂರು : ಹೆದ್ದಾರಿ ಕಮರಿಗೆ ಬಿದ್ದ ಸಿಮೆಂಟ್ ಟ್ರಕ್;ಅಗ್ನಿಶಾಮಕದಳ,ಸ್ಥಳೀಯರ ಹರಸಾಹಸ ಚಾಲಕನ ರಕ್ಷಣೆ.

ಮಂಗಳೂರು: ವೈಟ್ ಸಿಮೆಂಟ್ ತುಂಬಿದ್ದ ಟ್ರಕ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ರಾ.ಹೆ 66 ರ ಜಪ್ಪಿನಮೊಗರು ಎಂಬಲ್ಲಿ ಇಂದು ಸಂಜೆ ಸಂಭವಿಸಿದ್ದು ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನ ಸ್ಥಳೀಯರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಒಂದೂವರೆ ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.


ತಮಿಳು ನಾಡು ಮೂಲದ ನಾಗರಾಜ್ ಎಂಬ ಟ್ರಕ್ ಚಾಲಕನನ್ನ ರಕ್ಷಿಸಲಾಗಿದೆ.ಮಂಗಳೂರಿನಿಂದ‌ ಕೇರಳದ ಕಡೆಗೆ ವೈಟ್ ಸಿಮೆಂಟ್ ಹೊತ್ತು ಸಾಗುತ್ತಿದ್ದ ತಮಿಳು ನಾಡು ನೋಂದಣಿಯ ಟ್ರಕ್ನ ಟಯರ್ ಜಪ್ಪಿನ ಮೊಗರು ಯೆನೆಪೋಯ ಶಾಲೆಯ ಮುಂಭಾಗದಲ್ಲಿ ಬ್ಲಾಸ್ಟ್ ಆಗಿದೆ.ನಿಯಂತ್ರಣ ತಪ್ಪಿದ ಟ್ರಕ್ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದಿದೆ.ಟ್ರಕ್ ನಲ್ಲಿದ್ದ ಕ್ಲೀನರ್ ತಕ್ಷಣ ಜಿಗಿದು ಪ್ರಾಣ ರಕ್ಷಿಸಿದ್ದಾನೆ.

ಚಾಲಕ ನಾಗರಾಜ್ ಟ್ರಕ್ ಒಳಗಡೆ ಸಿಲುಕಿದ್ದು ಆತನ ಮೇಲೆ ಸಿಮೆಂಟ್ ಮೂಟೆಗಳು ರಾಶಿ ಬಿದ್ದಿತ್ತು.ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಮೂಟೆಗಳನ್ನ ಎತ್ತಿ ಕಾಲಿ ಮಾಡಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿ ಗ್ಯಾಸ್ ಕಟ್ಟರ್ ಇನ್ನಿತರ ಸಲಕರಣೆಗಳಿಂದ ನಿರಂತರ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಚಾಲಕನನ್ನ ರಕ್ಷಿಸಿದ್ದಾರೆ.ತಮಿಳು ನಾಡು ಮೂಲದ ಚಾಲಕ ನಾಗರಾಜ್ ಅವರು ಸಣ್ಣ,ಪುಟ್ಟ ಗಾಯಗೊಂಡು ಪವಾಡ ಸದೃಶರಾಗಿ ಪಾರಾಗಿದ್ದು ,ಚಾಲಕ ಮತ್ತು ಕ್ಲೀನರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿಶಾಮಕ ದಳ ಮತ್ತು ಸ್ಥಳೀಯರ ರಕ್ಷಣಾ ಕಾರ್ಯ ಎಲ್ಲರ ಶ್ಲಾಘನೆಗೆ ವ್ಯಕ್ತವಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular