ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಶೀತ ಮಾರುತ ಜನಜೀವನವನ್ನೇ ಛಿದ್ರಗೊಳಿಸಿದೆ. ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಕ್ರಿಸ್‌ಮಸ್ ವಾರಾಂತ್ಯದ ಸಂಭ್ರಮಾಚರಣೆಯನ್ನು ಬಿರುಗಾಳಿ, ಮಳೆ ಹಾಳುಗೆಡವಿದೆ. ಇದು ಈ ಹಿಂದೆಂದೂ ಕಂಡರಿಯದ ಹವಾಮಾನ ಪರಿಸ್ಥಿತಿ ಎನ್ನಲಾಗಿದ್ದು, “ಶತಮಾನದ ಹಿಮ ಬಿರುಗಾಳಿ” ಎಂದು ಅಧಿಕಾರಿಗಳು ಕರೆದಿದ್ದಾರೆ.
ಚಂಡಮಾರುತದ ವ್ಯಾಪ್ತಿಯು ಸುಮಾರು ಅಭೂತಪೂರ್ವವಾಗಿದೆ, ಕೆನಡಾದ ಬಳಿಯ ಗ್ರೇಟ್ ಲೇಕ್ಸ್‌ನಿಂದ ಮೆಕ್ಸಿಕೊದ ಗಡಿಯುದ್ದಕ್ಕೂ ರಿಯೊ ಗ್ರಾಂಡೆವರೆಗೆ ವ್ಯಾಪಿಸಿದೆ. U.S. ಜನಸಂಖ್ಯೆಯ ಸುಮಾರು 60% ಜನರು ಕೆಲವು ರೀತಿಯ ಚಳಿಗಾಲದ ಹವಾಮಾನ ಸಲಹೆ ಅಥವಾ ಎಚ್ಚರಿಕೆಯನ್ನು ಎದುರಿಸಿದರು ಮತ್ತು ರಾಕಿ ಪರ್ವತಗಳ ಪೂರ್ವದಿಂದ ಅಪ್ಪಲಾಚಿಯನ್‌ಗಳವರೆಗೆ ತಾಪಮಾನವು ಸಾಮಾನ್ಯಕ್ಕಿಂತ ತೀವ್ರವಾಗಿ ಕುಸಿದಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಹೇಳಿದೆ.
ಈವರೆಗೂ ನ್ಯೂಯಾರ್ಕ್‌ನಲ್ಲಿ ಕನಿಷ್ಠ 27 ಮಂದಿ ಬಿರುಗಾಳಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಅಮೆರಿಕದಲ್ಲಿ ಶೀತ ಮಾರುತಗಳ ಆರ್ಭಟಕ್ಕೆ ಸುಮಾರು 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದ ಈಶಾನ್ಯ ಭಾಗದಲ್ಲಿ ಹಿಮ ಬಿರುಗಾಳಿಯ ಪ್ರತಿಕೂಲ ಸನ್ನಿವೇಶ ಶಮನಗೊಳ್ಳುವ ಸೂಚನೆ ನೀಡಿಲ್ಲ. ಬಫಲೋ ನಗರದ ಸುತ್ತಲೂ ಬೆಟ್ಟಗಳಂತೆ ಆವರಿಸಿರುವ ಹಿಮಗಡ್ಡೆಗಳನ್ನು ತೆರವುಗೊಳಿಸುವ ರಕ್ಷಣಾ ಕಾರ್ಯ ನಡೆಯುತ್ತಿದೆ.