ತಿರುವನಂತಪುರಂ : ಹಕ್ಕಿ ಜ್ವರ ಅಂದರೆ ಕುಕ್ಕುಟೋದ್ಯಮಕ್ಕೆ ದೊಡ್ಡ ಆಘಾತ ,ಅದರಲ್ಲೂ ಕೇರಳದ ತಿರುವನಂತಪುರಂ ಜಿಲ್ಲೆಯ ತಾಳಯಾಳಂ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಪರಿಣಾಮ ಅಲ್ಲಿನ ಜಿಲ್ಲಾಧಿಕಾರಿ ಪಿ.ಕೆ ಜಯಶ್ರೀ ಹಾಗೂ ಅವರ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ ..
ಹಕ್ಕಿಜ್ವರ ಇರುವ ಪ್ರದೇಶಗಳ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಕೊಳ್ಳುವಂತೆ ಸ್ಥಳೀಯ ಸಂಸ್ಥೆ ಹಾಗು ಪಶು ಸಂಗೋಪನಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಲಾಗಿದೆ.
ಕೊಟ್ಟಾಯಂ ಜಿಲ್ಲೆಯ ಎರಡು ಪಂಚಾಯಿತ್ ವ್ಯಾಪ್ತಿಗಳಲ್ಲಿ ಹಕ್ಕಿ ಜೆwರ ಕಾಣಿಸಿಕೊಂಡ ಕಾರಣ ಸುಮಾರು 8೦೦೦ ಬಾತುಕೋಳಿ ,ಕೋಳಿ ಮತ್ತು ದೇಶಿಯ ಪಕ್ಷಿಗಳನ್ನು ಕೊಳ್ಳುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ .
ಹಕ್ಕಿ ಜ್ವರ ಪೀಡಿತ ಪ್ರದೇಶದ10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡಿಸೆಂಬರ್ ೧೩ ರಿಂದ ಕೋಳಿ ,ಬಾತುಕೋಳಿ ,ಮೊಟ್ಟೆ ,ಮಾಂಸ ,ಹಾಗು ಇದಕ್ಕೆ ಸಂಬಂದಿತ ಉತ್ಪನ್ನಗಳ ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಲು ಜಿಲ್ಲಾಡಳಿತ ಆದೇಶ ನೀಡಿದೆ