ಬಿಹಾರ ; ಯುವಕನೋರ್ವ ಮಧ್ಯರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.
ರಾತ್ರೆಯ ವೇಳೆ ಯಾರು ಇಲ್ಲದ ಸಮಯದಲ್ಲಿ ಇವರಿಬ್ಬರ ಭೇಟಿ ನಡೆಯುತಿತ್ತು ,ಆಕೆಯ ಜೊತೆ ಏಕಾಂತದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕುಟುಂಬಸ್ಥರಿಗೆ ಯಾರೋ ಇರೋದು ತಿಳಿದು ಬಂದಿದೆ .
ಆ ಸಮಯದಲ್ಲಿ ಗಾಬರಿಯಿಂದ ಓಡಿ ಹೋಗಲು ಪ್ರಯತ್ನಿಸಿದಾಗ ದಿಕ್ಕು ತೋಚಲಾಗದೆ ಆತ ತಪ್ಪಿಸಿಕೊಳ್ಳಲು ಓಡಿದ್ದು, ತೆರೆದ ಬಾವಿಗೆ ಬಿದ್ದಿದ್ದಾನೆ.
ಯುವಕ ಬಾವಿಗೆ ಬಿದ್ದು ಜೀವ ಉಳಿಸಲು ಸಹಾಯ ಮಾಡಿ ಎಂದು ಕೂಗಾಡುವಾಗ ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು ಬಾವಿಯ ಸುತ್ತಲೂ ಸೇರಿದ್ದಾರೆ. ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು ಆತನನ್ನು ಮೇಲಕ್ಕೆ ಎತ್ತಲಾಗಿದೆ.
ಯುವಕ ಯುವತಿಯ ವಿಷಯ ತಿಳಿದ ಮನೆಯವರು ಪಂಚಾಯಿಯಲ್ಲಿ ದೂರು ನೀಡಿದ್ದಾರೆ ,ನಂತರ ಊರಿನವರೆಲ್ಲ ಸೇರಿ ಹಿರಿಯರೆಲ್ಲರೂ ಸೇರಿ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ಮಾಡಿಸಿಕೊಟ್ಟಿದ್ದಾರೆ.ಇಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ.