Wednesday, December 4, 2024
Flats for sale
Homeರಾಜ್ಯಬೆಂಗಳೂರು : ಮನೆಯಲ್ಲಿದ್ದ ಅಡುಗೆ ಸಿಲಿಂಡರ್‌ ಸ್ಫೋಟ,ಮೂವರು ಯುವಕರು ಗಂಭೀರ ..!

ಬೆಂಗಳೂರು : ಮನೆಯಲ್ಲಿದ್ದ ಅಡುಗೆ ಸಿಲಿಂಡರ್‌ ಸ್ಫೋಟ,ಮೂವರು ಯುವಕರು ಗಂಭೀರ ..!

ಬೆಂಗಳೂರು : ಮನೆಯಲ್ಲಿದ್ದ ಸಿಲಿಂಡರ್‌ ಸ್ಫೋಟಗೊಂಡು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್‌ ನ ಕಾಚನಾಯಕನಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸಿಲಿಂಡರ್‌ ಸ್ಫೋಟದ ರಭಸಕ್ಕೆ ಮೂರು ಮನೆಗಳು ಧ್ವಂಸಗೊಂಡಿದೆ.

ಆನೇಕಲ್‌ ನ ಕಾಚನಾಯಕನಹಳ್ಳಿಯಲ್ಲಿ ಕೃಷ್ಣಾ ರೆಡ್ಡಿ ಮಗ ರಮೇಶ್ ಎಂಬುವವರ ಮನೆಯಲ್ಲಿ ಅಸ್ಸಾಂ ಮೂಲದ ನಾಲ್ವರು ಯುವಕರು ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕರು ಸಿಲಿಂಡರ್‌ ಸ್ಫೋಟದ ಘಟನೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಗೊಂಡ ಯುವಕರನ್ನು ಬಿದನ್‌ ದಾಸ , ದಯಾಲ್‌ ತಾಂತಿ ಹಾಗೂ ಗುಲಾಭ ಕರ್ಮಾಕರು ಎಂದು ಗುರುತಿಸಲಾಗಿದೆ. ಇವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ರಾತ್ರಿ ಅಡುಗೆ ಬೇಯಿಸಿ ತಿಂದು ಗ್ಯಾಸ್ ಸರಿಯಾಗಿ ಆಪ್ ಮಾಡದೇ ಮಲಗಿದ್ದಾರೆ. ರಾತ್ರಿಯಿಡೀ ಗ್ಯಾಸ್ ರೂಮಿನಲ್ಲಿ ಸೋರಿಕೆಯಾಗಿ ತುಂಬಿದೆ‌ ಬೆಳಗ್ಗೆ ಎದ್ದು ಸ್ವಿಚ್ ಆನ್ ಮಾಡಿದಾಗ ಈ ಅವಘಡ ಸಂಬವಿಸಿದೆ ಎಂದು ಮೂಲಗಳು ತಿಳಿಸಿವೆ.

ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular