ಬೆಳಗಾವಿ ; ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಪೋಲಿಸ್ ಠಾಣೆಯ ಎದುರು ಕುಳಿತು ಬಿಂದಾಸ್ ಆಗಿ ರಸ್ತೆ ಮದ್ಯೆ ಮದ್ಯ ಸೇವಿಸಿದ ಘಟನೆ ನಡೆದಿದೆ.
ಮದ್ಯ ಸೇವಿಸಿದ ವ್ಯಕ್ತಿಯನ್ನು ಉಪ್ಪಾರಗಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ. ವೈಯಕ್ತಿಕ ಸಮಸ್ಯೆ ಬಗೆಹರಿಸುವಂತೆ ಠಾಣೆಗೆ ಈ ವ್ಯಕ್ತಿ ಹೋಗಿದ್ದು ಈ ವೇಳೆ ಸಮಸ್ಯೆ ಗೆ ಪೋಲಿಸರು ಸರಿಯಾಗಿ ಸ್ಪಂದಿಸದೆ ಇರುವುದರಿಂದ ಠಾಣೆ ಎದುರು ರಸ್ತೆಯಲ್ಲಿ ಕುಳಿತು ಎಣ್ಣೆ ಹೊಡೆದಿದ್ದಾನೆ.
ರಸ್ತೆ ಮೇಲೆ ವಾಹನಗಳು ಓಡಾದುತ್ತಿದ್ದರೂ ಡೋಂಟ್ ಕೇರ್ ಎನ್ನದೆ ರಾಜಾರೋಷವಾಗಿ ಮದ್ಯ ಸೇವಿಸುತ್ತಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಎಚ್ಚೆತ್ತ ಪೋಲಿಸರು ವ್ಯಕ್ತಿಯನ್ನು ಸ್ಥಳದಿಂದ ಎಬ್ಬಿಸಿ ಕಳುಹಿಸಿದ್ದಾರೆ.