Thursday, December 12, 2024
Flats for sale
Homeರಾಜ್ಯಬೆಳಗಾವಿ : ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿ...

ಬೆಳಗಾವಿ : ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ..!

ಬೆಳಗಾವಿ : ಕಳೆದ ಹಲವಾರು ವರ್ಷಗಳಿಂದ ಬಸವ ಜಯ ಮೃತ್ಯುಂಜಯ ಮಾಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮಾಜದ 2 A ಮೀಸಲಾತಿ ಹೋರಾಟ ಇಂದು ಬೆಳಗಾವಿಯ ಸುವರ್ಣ ಸೌಧ ಹೊರವಲಯದ ಕೊಂಡಸಕೊಪ್ಪದ ಪ್ರತಿಭಟನಾ ಆವರಣದಲ್ಲಿ ಇಂದು ನಡೆಯಿತು.

ಹತ್ತು ಸಾವಿರಕ್ಕೂ ಅಧಿಕ ಪಂಚಮಸಾಲಿ 2A ಮೀಸಲಾತಿ ಹೋರಾಟಗಾರರು ಒಂದೆಡೆ ಸೇರಿ ಸಮಾವೇಶ ನಡೆಸುವ ಮೂಲಕ ಸರ್ಕಾರಕ್ಕೆ ಮೀಸಲಾತಿ ಘೋಷಣೆಯ ಗಡುವು ನೀಡಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಬಸನಗೌಡ ಪಾಟಿಲ ಯತ್ನಾಳ,ಸಿ.ಸಿ.ಪಾಟಿಲ್,ಬಿ ವೈ ವಿಜಯೇಂದ್ರ ಹಾಗೂ ಈರಣ್ಣ ಕದಾಡಿ,ಅರವಿಂದ ಬೆಲ್ಲದ ಸೇರಿದಂತೆ ಹಲವರು ಪ್ರತಿಭಟನೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ .

ಈ ವೇಳೆ ಮೀಸಲಾತಿ ಹೋರಾಟದ ಬೆಂಬಲಕ್ಕೆ ಆಗಮಿಸಿದ್ದ ಬಿ.ವೈ ವಿಜಯೆಂದ್ರ ವಿರುದ್ದ ಪಂಚಮಸಾಲಿ ಹೋರಾಟಗಾರರು ಧಿಕ್ಕಾರ ಕೂಗಿದ್ದರಿಂದ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಿಜಯೇಂದ್ರ ಅಲ್ಲಿಂದ ತೆರಳುವ ವೇಳೆ ತೇರದಾಳ ಶಾಸಕ ಸಿದ್ದು ಸವದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದ್ದು ಇನ್ನೂ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೆ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿ ಇದ್ದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,ಬಸನಗೌಡ ಪಾಟೀಲ ಯತ್ನಾಳ, ಈರಣ್ಣ ಕದಾಡಿ,ಹಾಗೂ ಅರವಿಂದ ಬೆಲ್ಲದ ಅವರನ್ನು ಪೋಲಿಸರು ವಶಕ್ಕೆ ಪಡೆದರು.

ಈ ವೇಳೆ ಸುವರ್ಣ ಸೌಧ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ ಮಾಡಿ ಹಲವರನ್ನು ಪೋಲಿಸರು ವಶಕ್ಕೆ ಪಡೆಯುವ ವೇಳೆ ಪೂನಾ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯಥ್ಯಯ ವಾಗಿದ್ದು ಪ್ರತಿಭಟನಾಕಾರರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದರಿಂದ 2A ಮೀಸಲಾತಿ ಹೋರಾಟದ ಪ್ರತಿಭಟನಾಕಾರರು ಪೋಲಿಸರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular