ಮಲ್ಪೆ: ಮೀನುಗಾರಿಕೆ ಅಂದರೆ ಹೀಗೇನೇ ಲಾಟರಿ ತರಹ ಬರೋಬ್ಬರಿ 22 ಕೆ.ಜಿ. ತೂಕವುಳ್ಳ ಮೀನು1.85 ಲಕ್ಷ ರೂಪಾಯಿಗೆ ಹರಾಜಾಯ್ತು,ಮಲ್ಪೆ ಮೀನುಗಾರರ ಬಲೆಗೆ ಸಿಕ್ಕಿದ ಅಪರೂಪದ ಮತ್ಸ್ಯ
ಕಳೆದ ಎರಡು ವರ್ಷಗಳ ಕೋವಿಡ್ ನಿರ್ಬಂಧದ ಬಳಿಕ ಈ ವರ್ಷ ಮೀನುಗಾರಿಕೆ ಉತ್ತಮವಾಗಿದ್ದು ಮಲ್ಪೆಯ (Malpe) ಮೀನುಗಾರರೊಬ್ಬರ ಬಲೆಗೆ 22 ಕೆ.ಜಿ. ತೂಕವುಳ್ಳ 1.85 ಲಕ್ಷ ರೂಪಾಯಿ ಮೌಲ್ಯದ ಗೋಳಿ ಮೀನು (Ghol Fish) ಸೋಮವಾರ ಬಲೆಗೆ ಬಿದ್ದಿದೆ.
ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ ಸಂದರ್ಭ ವ್ಯಕ್ತಿಯೊಬ್ಬರು 1.85 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ. ಇದು ಶಿವರಾಜ್ ಮಾಲೀಕತ್ವದ ಧನ್ಯ ಫಂಡರಿ ಹೆಸರಿನ ದೋಣಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಗೋಳಿ ಮೀನು ಬಲೆಗೆ ಬಿದ್ದಿದೆ. ಈ ಮೀನನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅದರ ವಿಡಿಯೋ ವೈರಲಾಗಿದೆ.
ಈ ಬಾರಿಯ ಮೀನುಗಾರಿಕೆ ಅತ್ಯುತ್ತಮ ವಾಗಿದ್ದು ಬೂತಾಯಿ, ಬಂಗುಡೆ, ಸಿಗಡಿ ಸಹಿತ ವಿವಿಧ ಮೀನುಗಳು ಹೇರಳವಾಗಿ ದೋಣಿಗಳಿಗೆ ಸಿಗುತ್ತಿವೆ. ಡಿಸೆಂಬರ್ ಅಂತ್ಯಕ್ಕೆ ಹೆಚ್ಚಿನ ಮೀನುಗಳು ಲಭ್ಯವಾಗುತ್ತಿವೆ. ಚಂಡಮಾರುತಗಳ ಪ್ರಭಾವದಿಂದ ಮೀನುಗಳು ಕರಾವಳಿಯತ್ತ ವಲಸೆ ಬಂದಿರಬಹುದು ಎಂದು ಮಲ್ಪೆ ಮೀನುಗಾರರು ಅಭಿಪ್ರಾಯ ಪಟ್ಟಿದ್ದಾರೆ.