ಆನೇಕಲ್ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಕೋರ್ಟ್ ಆವರಣದಲ್ಲಿ ವಕೀಲ ಕಣ್ಣನ್ ರನ್ನು ಮತ್ತೋರ್ವ ವಕೀಲರ ಸಹಾಯಕ ಅರುವಾಲ್ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ಆನೇಕಲ್ ಭಾಗ ಬೆಚ್ಚಿ ಬಿದ್ದಿದೆ. ಮೊನ್ನೆ ರಾತ್ರಿಯಷ್ಟೇ ಆನೇಕಲ್ ರೌಡಿ ಶೀಟರ ಮನೋಜ್ ಇನ್ನೋವಾ ಕಾರಿನ ಮೇಲೆ 20 ಮಂದಿ ಮುಗಿಬಿದ್ದು ಕದಲೇಳೆಯಲ್ಲಿ ತಪ್ಪಿಸಿಕೊಂಡು ಹೋದ ಘಟನೆ ಮಾಸುವ ಮುನನ ಪಕ್ಕದ ತಾಲೂಕಿನ ಹೊಸೂರಿನಲ್ಲಿ ಹಾಡ ಹಗಲೇ ಜನರು ನೋಡುತ್ತಿದ್ದಂತೆಯೇ ವಕೀಲರನ್ನ ಕೆಡವಿ ಮಚ್ಚಿನಿಂದ ತಲೆ ಬುಜಕ್ಕೆ ಕೊಚ್ಚಿದ ಘಟನೆ ಭೀತಿ ಮೂಡಿಸಿದೆ.
ಹೊಸೂರು ಹಿರಿಯ ಖ್ಯಾತ ವಕೀಲ ಎಂ ಸತ್ಯನಾರಾಯಣ್ ಬಳಿ ಸಹಾಯಕ ವಕೀಲರಾಗಿದ್ದ ಹೊಸೂರಿನ ವಕೀಲ ಕಣ್ಣನ್ ಹೊಸೂರು ಕೆರೆ ಬೀದಿಯ ಮೂಲದವರಾಗಿದ್ದು ಹೊಸೂರಿನಲ್ಲಿ ಖ್ಯಾತ ವಕೀಲ ಸತ್ಯನಾರಾಯಣ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು . ಹೊಸೂರು ನಾಮಲ್ ಪೆತ್ತಾಟ್ ನ ಆನಂದ್ ಕುಮಾರ್ ಮತ್ತೊಬ್ಬ ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರೂ ಗೆಳೆಯರು ಎನ್ನಲಾಗಿದೆ.
ಹೊಸೂರು ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲ ಕಣ್ಣನ್ ಅವರನ್ನು ಆನಂದಕುಮಾರ್ ಕುಡುಗೋಲಿನಿಂದ ಕೊಚ್ಚಿದ್ದಾನೆ ಆದರೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಣ್ಣನ್ ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಡೀ ಘಟನೆಯನ್ನು ಸುತ್ತಮುತ್ತಲಿನ ಜನರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ತೀವ್ರವಾಗಿ ಗಾಯಗೊಂಡು ಕೆಳಗೆ ಬಿದ್ದ ಕಣ್ಣನ್ ಗೆ ಮಚ್ಚಿನಿಂದ ಕಡಿಯುವುದನ್ನು ಮುಂದುವರಿಸಿದ್ದು ವಕೀಲ ಕಣ್ಣನ್ ಅವರ ಕುತ್ತಿಗೆ, ತಲೆ, ಬೆನ್ನು ಸೇರಿದಂತೆ 5 ಕಡೆ ತೀವ್ರವಾಗಿ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು..
ಇದಾದ ಬಳಿಕ ಮಾಹಿತಿ ತಿಳಿದ ಪೊಲೀಸರು ಬಂದು ವಕೀಲರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ವಕೀಲರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಕುಡುಗೋಲು ಹಿಡಿದು ನಿಂತಿದ್ದ ಆನಂದ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.