ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ತಿಕ್ಕಾಟ ತಾರಕಕ್ಕೇರಿದ್ದು, ಭಿನ್ನರ ವಿರುದ್ಧ ವರಿಷ್ಠರಿಗೆ ದೂರು ನೀಡಲು ಬಿಜೆಪಿ ನಿಷ್ಠರ ಗುಂಪು ದೆಹಲಿ ಯಾತ್ರೆ ಕೈಗೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ರಾಜ್ಯಘಟಕದಲ್ಲಿ ಪದಾಧಿಕಾರಿಗಳ ಬದಲಾವಣೆಗೆ ಆಗ್ರಹಿಸಿ ಭಿನ್ನ ನಾಯಕರುಗಳು ವರಿಷ್ಠರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷ ಮತ್ತಷ್ಟು ಜೋರಾಗಲಿದೆ.
ಬಿಜೆಪಿಯಲ್ಲಿನ ಈ ಬಣ ತಿಕ್ಕಾಟವನ್ನು ವರಿಷ್ಠರು ಗಂಭೀರವಾಗಿ ತೆಗೆದುಕೊಂಡು ಬಣ ಸಂಘರ್ಷವನ್ನು ನಿಯಂತ್ರಿಸಿ ಎಲ್ಲದ್ದಕ್ಕೂ ಯಾವಾಗ ಮದ್ದು ಅರೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ನಿಷ್ಠರು ಭಿನ್ನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ ವರಿಷ್ಠರೂ ಮಾತ್ರ ಇದುವರೆಗೂ ಭಿನ್ನರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೆ ಭಿನ್ನರಿಗೆ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಯಾತ್ರೆ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ಬಿಜೆಪಿಯಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಭಿನ್ನರ ಈ ವಕ್ಫ್ ಯಾತ್ರೆಗೆ ವರಿಷ್ಠರು ಪರೋಕ್ಷ ಬೆಂಬಲವಿದೆಯೇ ಎಂಬ ಪ್ರಶ್ನೆಯೂ ಮೂಡಿದ್ದು, ಉಪಚುನಾವಣೆ ಫಲಿತಾಂಶದ ನAತರ ವರಿಷ್ಠರು ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆಯೇ ಎಂಬ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದೆ.
ಶತಾಯ-ಗತಾಯ ಭಿನ್ನರನ್ನು ನಿಯಂತ್ರಿಸಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದು, ವರಿಷ್ಠರಿಗೂ ಎಲ್ಲವನ್ನೂ ಮನವರಿಕೆ ಮಾಡಿ ಭಿನ್ನ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಮುಂದಾಗಿದ್ದಾರೆ.
ಇಷ್ಟೆಲ್ಲ ಆದರೂ ಬಿಜೆಪಿಯ ಭಿನ್ನ ನಾಯಕರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವರಿಷ್ಠರ ಆರ್ಶೀವಾದ ಬೆಂಬಲ ತಮಗಿದೆ ಎಂಬ ಮನಃಸ್ಥಿತಿಯಲ್ಲಿ ವಕ್ಫ್ಗೆ ಸಂಬAಧಿಸಿದAತೆ ತಮ್ಮದೇ ಆದ ಪ್ರತ್ಯೇಕ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಇದು ಬಿಜೆಪಿ ನಿಷ್ಠರನ್ನು ಕೆರಳಿಸಿದ್ದು, ಬಿಜೆಪಿ ನಿಷ್ಠರು ಸದ್ಯದಲ್ಲೇ ದೆಹಲಿಗೆ ತೆರಳಿ ಭಿನ್ನರ ವಿರುದ್ಧ ದೂರು ನೀಡಲು ಸಜ್ಜಾಗಿದ್ದಾರೆ. ವಕ್ಫ್ ವಿವಾದಕ್ಕೆ ಸಂಬAಧಿಸಿದAತೆ ರಾಜ್ಯ ನಾಯಕತ್ವಕ್ಕೆ ಸಡ್ಡು ಹೊಡೆದು ಪ್ರತ್ಯೇಕಯಾತ್ರೆ ನಡೆಸುತ್ತಿರುವ ಭಿನ್ನರ ವಿರುದ್ಧ ಪಕ್ಷದ ನಿಷ್ಠ ನಾಯಕರುಗಳು ಕೆಂಡಾಮಂಡಲಗೊಂಡಿದ್ದು , ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಭಿನ್ನರ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಜತೆಗಿರುವ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದು, ಸದ್ಯದಲ್ಲೇ ದೆಹಲಿಗೆ ತೆರಳಿ ಭಿನ್ನ ನಾಯಕರ ವಿರುದ್ಧ ವರಿಷ್ಠರಿಗೆ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದ ನಿಷ್ಠರು ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಲು ತಯಾರಿ ನಡೆಸಿರುವಾಗಲೇ ಬಿಜೆಪಿಯ ಭಿನ್ನ ನಾಯಕರೂ ಸಹ ವಕ್ಫ್ ವಿವಾದಕ್ಕೆ ಸಂಬAಧಿಸಿದAತೆ ನಡೆಸುತ್ತಿರುವ ಅಭಿಯಾನ ಮುಗಿಯುತ್ತಿದ್ದಂತೆಯೇ ದೆಹಲಿಗೆ ತೆರಳಿ ರಾಜ್ಯ ನಾಯಕತ್ವದ ವಿರುದ್ಧ ದೂರು ಸಲ್ಲಿಸಲು ನಿರ್ಧರಿಸಿರುವುದು ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಪರಾಕಾಷ್ಠೆ ತಲುಪಿರುವುದನ್ನು ಸಂಕೇತಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ೨೦ಕ್ಕೂ ಹೆಚ್ಚು ನಾಯಕರುಗಳು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಬೆಂಗಳೂರಿನ ನಿವಾಸದಲ್ಲಿ ಕೆಲ ದಿನಗಳ ಹಿಂದೆ ಸಭೆ ಸೇರಿ ಭಿನ್ನರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು. ಅದರಂತೆ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದ ನಿಯೋಗ ಸದ್ಯದಲ್ಲೇ ದೆಹಲಿಗೆ ತೆರಳಿ ಭಿನ್ನರ ವಿರುದ್ಧ ಕ್ರಮಕೈಗೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡುವರು ಎಂದು ಹೇಳಲಾಗಿದೆ.
ವಕ್ಫ್ ಗೆ ಸಂಬAಧಿಸಿಧAತೆ ಭಿನ್ನ ನಾಯಕರು ಪ್ರತ್ಯೇಕ ಅಭಿಯಾನವನ್ನು ನಡೆಸುವ ಮೂಲಕ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯ ನಾಯಕತ್ವಕ್ಕೂ ಸಡ್ಡು ಹೊಡೆದು ಶಿಸ್ತು ಉಲ್ಲಂಘಿಸಿದ್ದಾರೆ. ಹಾಗಾಗಿ ಹೈಕಮಾಂಡ್ಕೂ ಡಲೇ ಮಧ್ಯ ಪ್ರವೇಶಿಸಿ ಭಿನ್ನ ನಾಯಕರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಇವರುಗಳು ವರಿಷ್ಠರನ್ನು ಮನವಿ ಮಾಡುವರು. ಭಿನ್ನರಿಂದಲೂ ದೂರು, ದೆಹಲಿ ಯಾತ್ರೆ ಪಕ್ಷ ನಿಷ್ಠ ನಾಯಕರುಗಳು ತಮ್ಮ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ಪ್ರತಿಯಾಗಿ ಬಿಜೆಪಿಯ ಭಿನ್ನ ನಾಯಕರೂ ಸಹ ದೆಹಲಿ ಯಾತ್ರೆ ಕೈಗೊಂಡು ರಾಜ್ಯ ನಾಯಕತ್ವದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಹಿರಿಯ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಉಪಚುನಾವಣೆಯಲ್ಲೂ ಪಕ್ಷಕ್ಕೆ ಸೋಲಾಗಿದೆ. ಹಾಗಾಗಿ. ರಾಜ್ಯ ಘಟಕದ ಪದಾಧಿಕಾರಿಗಳ ಬದಲಾವಣೆ ಮಾಡಿ ಪಕ್ಷವನ್ನು ಸದೃಢವಾಗಿ ಕಟ್ಟಲು ಏನೆಲ್ಲ ಮಾಡಬೇಕೋ ಅದನ್ನು ಮಾಡಿ ಎಂದು ವರಿಷ್ಠರು ಭಿನ್ನರಿಗೆ ಮನವಿ ಮಾಡುವರು ಎನ್ನಲಾಗಿದೆ.
ಈಗ ವಕ್ಫ್ ವಿವಾದಕ್ಕೆ ಸಂಬAಧಿಸಿದAತೆ ಅಭಿಯಾನ ನಡೆಸುತ್ತಿರುವ ಭಿನ್ನರು ಅಭಿಯಾನ ಪೂರ್ಣಗೊಳ್ಳುತ್ತಿದ್ದಂತೆಯೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವರು ಎನ್ನಲಾಗಿದೆ
ಮುಂದುವರೆದಭಿನ್ನರ ಅಭಿಯಾನ..
ರಾಜ್ಯ ನಾಯಕತ್ವಕ್ಕೆ ಸಡ್ಡು ಹೊಡೆದು ವಕ್ಫ್ ಗೆ ಸಂಬAಧಿಸಿದAತೆ ಪ್ರತ್ಯೇಕ ಯಾತ್ರೆ ನಡೆಸುತ್ತಿರುವ ಬಿಜೆಪಿ ಭಿನ್ನರ ಯಾತ್ರೆ ಅಭಾಧಿತವಾಗಿ ಮುಂದುವರೆದಿದೆ. ಪ್ರತ್ಯೇಕ ಯಾತ್ರೆ ನಡೆಸುತ್ತಿರುವ ಭಿನ್ನರ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಅಸಮಾಧಾನ ಹೊರ ಹಾಕಿದ್ದರೂ ಭಿನ್ನರು ಮಾತ್ರ ಯಾವುದನ್ನು ಲೆಕ್ಕಿಸದೆ ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಇAದು ರಾಯಚೂರಿನಲ್ಲಿ ಭಿನ್ನರು ವಕ್ಫ್ ಗೆ ಸಂಬAಧಿಸಿದAತೆ ಸಭೆ ನಡೆಸಿ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಿಜೆಪಿ ಭಿನ್ನರ ನಾಯಕ ಬಸನಗೌಡ ಪಾಟೀಲ್ ಯತ್ನಾಳ್,ಮಾಜಿ ಸಚಿವರಾದ ಅರವಿಂದ ಲಿಂಬಾವಳಿ,ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್, ಮಾಜಿ ಸಚಿವ ಪ್ರತಾಪ್‌ಸಿಂಹ, ಮುಖ್ಯಮAತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಸೇರಿದಂತೆ ಹಲವು ನಾಯಕರು ರಾಯಚೂರಿನಲ್ಲಿ ನಡೆದ ವಕ್ಫ್ ವಿರುದ್ಧದ ಅಭಿಯಾನದಲ್ಲಿ ಭಾಗಿಯಾಗಿದ್ದರು.