ಬೀದರ್ : ಹುಲಸೂರ ತಾಲ್ಲುಕಿನಲ್ಲಿ ಬರುವ ಮುಸ್ತಾಪುರ ಗ್ರಾಮದಲ್ಲಿ ನಾಲ್ಕು ಎಕರೆ ಕಬ್ಬಿನ ಹೊಲಕ್ಕೆ ಶಾಟಸರ್ಕಿಟ್ ನಿಂದ ಬೆಂಕಿ ತಗುಲಿದ ಪರಿಣಾಮ ಅಪಾರ ಹಾನಿಯಾಗಿದ್ದು ರೈತ ಬೆಳೆ ನಷ್ಟದಿಂದ ಕಂಗಾಲಾಗಿದ್ದಾನೆ.
ಮುಸ್ತಾಪುರ ಗ್ರಾಮದ ಬಾಲಾಜಿ ತಂದೆ ವಾಮನರಾವ ಪಾಟಿಲ ಎನ್ನುವ ರೈತರ ಹೊಲ ಆಗಿದ್ದು, ಶಾಟ ಸರ್ಕಿಟ್ ನಿಂದ ರವಿವಾರ ಮಧ್ಯಾಹ್ನ ಹೋತ್ತಿನಲ್ಲಿ ಕಬ್ಬಿಗೆ ಬೆಂಕಿ ತಗುಲಿದು,ಬಹಳಷ್ಟು ಹಾನಿಯಾಗಿದ್ದು, ಬೆಂಕಿಯಲ್ಲಿ ಎತ್ತಿನ ಗಾಡಿಗೆ ಬೆಂಕಿ ತಗುಲಿದು,ಎತ್ತುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತದಿಂದ ಎತ್ತುಗಳು ಬಚಾವ ಆಗಿರುವದಾಗಿ ಮಾಹಿತಿ ತಿಳಿದು ಬಂದಿದೆ.
ಬೆಂಕಿ ತಗುಲಿರುವುದನ್ನು ಗಮನಿಸಿದ ರೈತರು ಕೂಡಲೆ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ನಂತರ ಅಗ್ನಿ ಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿರುವುದಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವಕುಮಾರ ಅಲ್ಲಾಪುರೆ ಮಾಹಿತಿ ತಿಳಿಸಿದಾರೆ.


