Saturday, March 14, 2026
Flats for sale
Homeಜಿಲ್ಲೆಮುಲ್ಕಿ : ಡಿವೈಡರ್ ಗೆ ನುಗ್ಗಿದ ಮೈನ್ಸ್ ಲಾರಿ, ತಪ್ಪಿದ ಬಾರಿ ಅನಾಹುತ,ಚಾಲಕನ ಅಜಾಗರೂಕತೆಯಿಂದ ಹಲವರಿಗೆ...

ಮುಲ್ಕಿ : ಡಿವೈಡರ್ ಗೆ ನುಗ್ಗಿದ ಮೈನ್ಸ್ ಲಾರಿ, ತಪ್ಪಿದ ಬಾರಿ ಅನಾಹುತ,ಚಾಲಕನ ಅಜಾಗರೂಕತೆಯಿಂದ ಹಲವರಿಗೆ ಗಾಯ.

ಮಂಗಳೂರು : ಚಾಲಕನ ಅತಿವೇಗದ ಚಾಲನೆಯಿಂದ ಮೈನ್ಸ್ ಲಾರಿಯೊಂದು ನಿಯಂತ್ರಣ ತಪ್ಪಿ ಬೈಕ್ ಮತ್ತು ಆಟೋ ರಿಕ್ಷಾ ಜಖಂಗೊಂಡಿದೆ. ರಸ್ತೆ ಬದಿ ಕುಳಿತಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಲ್ಕಿ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಉಡುಪಿ ಕಡೆಗೆ ತೆರಳುತ್ತಿದ್ದ ಲಾರಿ ಮುಖ್ಯರಸ್ತೆ ಬಿಟ್ಟು ಸರ್ವಿಸ್ ರಸ್ತೆಗೆ ಪ್ರವೇಶಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ಸಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಗಪ್ಪ ಮುಲ್ಕಿಯ ಲಾಡ್ಜ್‌ನಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಮಗಳನ್ನು ಡ್ರಾಪ್ ಮಾಡಲು ಬಸ್ ಸ್ಟ್ಯಾಂಡ್ ಕಡೆಗೆ ಹೋಗುತ್ತಿದ್ದರು. ಅವರ ಪುತ್ರಿ ಸವಿತಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫುಟ್ ಪಥ ನಲ್ಲಿ ಕುಳಿತಿದ್ದ ದಿನಗೂಲಿ ಕಾರ್ಮಿಕರು ತಮ್ಮ ಕಡೆಗೆ ಟ್ರಕ್ ಬರುತ್ತಿರುವುದನ್ನು ಕಂಡು ಸುರಕ್ಷಿತವಾಗಿ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೂ ಗಾಯಗೊಂಡಿದ್ದಾರೆ. ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ ಆಟೋ ರಿಕ್ಷಾ ಪಲ್ಟಿಯಾಗಿದೆ. ಅಪಘಾತದ ನಂತರವೂ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸಲಿಲ್ಲ. ಮುಲ್ಕಿ ಪೊಲೀಸರು ಟ್ರಕ್ ಅನ್ನು ಹಿಂಬಾಲಿಸಿ ವಾಹನವನ್ನು ಜಪ್ತಿ ಮಾಡಿ ಚಾಲಕನನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular