Sunday, March 15, 2026
Flats for sale
Homeರಾಜ್ಯಗಂಗಾವತಿ : ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಪಟಾಕಿ ಹೊಡೆದು, ಜನರಿಗೆ ಸಿಹಿ ಸಂಭ್ರಮಾಚರಣೆ.

ಗಂಗಾವತಿ : ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಪಟಾಕಿ ಹೊಡೆದು, ಜನರಿಗೆ ಸಿಹಿ ಸಂಭ್ರಮಾಚರಣೆ.

ಗಂಗಾವತಿ : ಪಂಚರಾಜ್ಯಗಳ ಚುನಾವಣೆಯ ಪೈಕಿ ನಾಲ್ಕು ರಾಜ್ಯದ ಫಲಿತಾಂಶ ಪ್ರಟಕವಾಗಿದ್ದು, ಈ ಪೈಕಿ ಮೂರು ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದ ಬಿಜೆಪಿ ಸಾಧನೆಯನ್ನು ಸ್ವಾಗತಿಸಿ ಇಲ್ಲಿನ ಗಾಂಧಿವೃತ್ತದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜನರಿಗೆ ಸಿಹಿ ಹಂಚಿ, ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದರು.

ಮಾಜಿಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಮಹಿಳಾ ಮೋಚರ್ಾದ ಪ್ರಮುಖರು, ಪಕ್ಷದ ಕಾರ್ಯಕರ್ತರು, ಪ್ರಮುಖರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಶಾಸಕ ಪರಣ್ಣ ಮುನವಳ್ಳಿ, ಜನರಿಗೆ ಕಾಂಗ್ರೆಸ್ ಪಕ್ಷದ ಬಿಟ್ಟಿ ಭಾಗ್ಯಗಳು ಬೇಕಿಲ್ಲ. ಅವರಿಗೆ ಬೇಕಿರುವುದು ಮೋದಿ ಎಂಬ ಒಂದೇ ಒಂದು ಗ್ಯಾರಂಟಿ ಎಂಬುವುದು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ.

ರಾಜ್ಯಗಳನ್ನು ದಿವಾಳಿ ಎಬ್ಬಿಸಿ, ಇಡೀ ದೇಶವನ್ನು ಒತ್ತೆ ಇಡುವ ಕಾಂಗ್ರೆಸ್ ಪಕ್ಷದ ಸಂಚು ಜನರಿಗೆ ಗೊತ್ತಾಗಿದೆ. ರಾಜ್ಯದಲ್ಲಿ ಈಗಾಗಲೆ ಉಚಿತ ಭಾಗ್ಯಗಳಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇದರ ಫಲಶೃತಿ ಗೊತ್ತಾಗಲಿದೆ.

ಇಡೀ ದೇಶ ಕೇವಲ ಮೋದಿ ಎಂಬ ಮಾಂತ್ರಿಕನ ಮೇಲೆ ವಿಶ್ವಾಸ ಇರಿಸಿದೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಅಸ್ತಿತ್ವವೇ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹತ್ತು ಶಾಸಕರು ಆಯ್ಕೆ ಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿದೆ ಎಂದರು.

ಯುವ ಮುಖಂಡ ಸಂಗಮೇಶ ಸುಗ್ರೀವಾ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ವಿಲವಿಲ, ಬಿಜೆಪಿ ಕಲಕಲವಾಗಲಿದೆ. ಈ ಫಲಿತಾಂಶ ಲೋಕಸಭೆಗೆ ಮುನ್ನುಡಿಯಾಗಲಿದೆ. ಮುಖ್ಯವಾಗಿ ರಾಜ್ಯದ ಡಿಸಿಎಂ ಶಿವಕುಮಾರ ಅವರಿಗೆ ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ.

ಆದರೆ ಇದನ್ನು ದುರುಪಯೊಗ ಮಾಡಿಕೊಳ್ಳುತ್ತಿರುವ ಶಿವಕುಮಾರ, ಇಲ್ಲಿನ ಹಣ ತೆಗೆದುಕೊಂಡು ಹೋಗಿ ತೆಲಂಗಾಣದಲ್ಲಿ ರೆಸಾಟರ್್ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಡಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಡಾದ ಮಾಜಿ ಅಧ್ಯಕ್ಷರಾದ ಎಚ್.ಗಿರೇಗೌಡ, ಎಚ್.ಎಂ. ತಿಪ್ಪೇರುದ್ರಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮಾತನಾಡಿದರು. ಮಹಿಳಾ ಪ್ರಮುಖರಾದ ಶೋಭಾರಾಯ್ಕರ್, ಗಿರಿಜಮ್ಮ, ಶೈಲಜಾ, ಸರಸ್ವತಿ ರಾಯಭಾಗಿ, ರೂಪಾ, ಸರಸ್ವತಿ ಕಾಟ್ವಾ, ಅಕ್ಕಮ್ಮ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular