Thursday, March 12, 2026
Flats for sale
Homeರಾಜ್ಯಶಿಗ್ಗಾವಿ : ಹಾವೇರಿ ರೈತ ಸಂಘಟನೆಗಳ ಒಕ್ಕೂಟ ದಿಂದ ಬೃಹತ್ ಪ್ರತಿಭಟನೆ.

ಶಿಗ್ಗಾವಿ : ಹಾವೇರಿ ರೈತ ಸಂಘಟನೆಗಳ ಒಕ್ಕೂಟ ದಿಂದ ಬೃಹತ್ ಪ್ರತಿಭಟನೆ.

ಶಿಗ್ಗಾವಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಶಿಗ್ಗಾವಿ ಇವರುಗಳ ಸಂಯುಕ್ತಾಶಯದಲ್ಲಿ ಶಿಗ್ಗಾವಿ. ವಿ.ಆಯ್.ಎನ್.ಪಿ. ಶುಗರ್ & ಯತ್ನಲ್ ಕಾರ್ಖಾನೆ, ಕೋಣನಕೇರಿ ಇವರ ಕಾರ್ಖಾನೆಯಲ್ಲಿ ಕಬ್ಬಿನ ದರದಲ್ಲಿ ವ್ಯತ್ಯಾಸ ಹಾಗೂ ಕಬ್ಬು ಕಟಾವು ಮಾಡುವ ಗ್ಯಾಂಗಮನ್‌ಗಳು ಮನಬಂದಂತೆ ಲಗಾನಿ ಕೇಳುತ್ತಿದ್ದು ಮತ್ತು ಕಮಿಷನ್ ರೂಪದಲ್ಲಿ ರೈತರ ಖಾತೆಗೆ ಕಡಿಮೆ ಹಣ ಸಂದಾಯ ಮಾಡುತ್ತಿದ್ದು ಈ ತಾರತಮ್ಯವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಕಬ್ಬು ಕಾರ್ಖಾನೆ ಕಬ್ಬು ಕಟಾವು ಬಂದು ನಿಂತಿದ್ದರು ಸ್ಥಳೀಯ ಅವಕಾಶ ಕೊಡ ಬೇರೆ ಜಿಲ್ಲೆ ಗಳು ಹಾಗೂ ಬೇರೆ ಊರು ನಿಂದ ಕಬ್ಬು ಕಟಾವು ಮಾಡಿ ತರಿಸಿಕೊಳ್ಳುತ್ತಿರುವುದು ನಿಗದಿತ ಹಣ ಪಾಲಿಸದೆ ಬೇರೆ ಕಾರ್ಖಾನೆ ಗಳಿಗಿಂತ ಕಡಿಮೆ ಹಣ ನೀಡುತ್ತಿದ್ದಾರೆ ಒಂದು ಲೋಡ ತುಂಬಿದ್ದರೆ ವಾಹನ ಚಾಲಕನಿಗೆ 500 ಹಣ ನೀಡಬೇಕು ಹೀಗೆ ಅನೇಕ ತೊಂದರೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅದರೆ ಸಕ್ಕರೆ ಕಾರ್ಖಾನೆ ಮಾಲೀಕರು ಸರಕಾರದ ನಿಯಮ ಗಾಳಿಗೆ ತೂರಿ ರೈತರಿಗೆ ಹಣ ನೀಡಿಲ್ಲ ಎಂದು ಹಾವೇರಿ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ ಆರೋಪಿಸಿದ್ದಾರೆ.

ಕಬ್ಬು ಕಟಾವು ಮತ್ತು ಸಾಗಾಣಿಕೆಯಲ್ಲಿ ಸಹ ತಮಗೆ ಅನ್ಯಾಯವಾಗುತ್ತಿದೆ. ಕಾರ್ಖಾನೆ ಮಾಲಿಕರೇ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಭರಿಸಿ ಪ್ರತಿ ಟನ್‌ಗೆ 3500 ರೂಪಾಯಿ ದರ ನೀಡುವಂತೆ ಕಬ್ಬು ಬೆಳೆಗಾರರು ಒತಾಯಿಸಿದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular