Thursday, December 12, 2024
Flats for sale
Homeರಾಜ್ಯರಿಪ್ಪನ್‌ಪೇಟೆ : "ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ನಿಮ್ಮನ್ನು ಕಳುಹಿಸಬೇಕಾಗುತ್ತೆ’’ಶಾಸಕ ಬೇಳೂರು ಗೋಪಾಲಕೃಷ್ಣ.

ರಿಪ್ಪನ್‌ಪೇಟೆ : “ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ನಿಮ್ಮನ್ನು ಕಳುಹಿಸಬೇಕಾಗುತ್ತೆ’’ಶಾಸಕ ಬೇಳೂರು ಗೋಪಾಲಕೃಷ್ಣ.

ರಿಪ್ಪನ್‌ಪೇಟೆ : ಜಲಜೀವನ ಮಿಷನ್ ಯೋಜನೆಯಡಿ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮಕ್ಕೆ ೪೫ ಲಕ್ಷ ರೂ ಅನುಧಾನ ಬಿಡುಗಡೆಯಾಗಿದ್ದು ಬಹುದಿನಗಳ ಬೇಡಿಕೆಯಂತೆ ಈ ಗ್ರಾಮದಲ್ಲಿನ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿತು ಈ ಯೋಜನೆಯನ್ವಯ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.

ಅವರು ಸಮೀಪದ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದಲ್ಲಿ ೪೫ ಲಕ್ಷ ರೂ ವೆಚ್ಚದ ಜಲಜೀವನ ಮಿಷನ್ ಯೋಜನೆಯಡಿ’’ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಸ್ಥಳೀಯಾಡಳಿತವು ಕಾಮಗಾರಿ ಕುರಿತು ಚರ್ಚಿಸಿ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುವುದರ ಬಗ್ಗೆ ಅಗಾಗ ಮಾಹಿತಿ ಪಡೆಯಬೇಕು.ಈ ಭಾರಿ ಶೇಕಡಾ ವಾಡಿಕೆ ಮಳೆ ಶೇಕಡಾ ೭೫ ಕ್ಕೂ ಹೆಚ್ಚು ಬರಬೇಕಾಗಿದ್ದು ೪೩ ರಷ್ಟು ಮಳೆಯಾಗಿದ್ದು ಆಂತರ್ಜಲ ಸಹ ಕುಸಿದಿದ್ದು ನೀರಿಗಾಗಿ ಜನರು ಪರದಾಡಬೇಕಾಗುವ ದಿನಗಳು ದೂರವಿಲ್ಲ ಆದ್ದರಿಂದಾಗಿ ಸಾರ್ವಜನಿಕರು ಹಂಡೆ ನೀರಿನ ಬದಲು ಬಕೇಟ್ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ನೀರಿನ ಮಿತ ಬಳಕೆ ಮಾಡುವಂತೆ ಕರೆ ನೀಡಿ ಮಲೆನಾಡಿನ ಪ್ರದೇಶವಾಗಿರುವ ಕಾರಣ ಮನೆಗಳು ದೂರ ದೂರದಲ್ಲಿದ್ದು ಇಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರ ಮನೆಗಳಿಗೂ ನೀರಿನ ಸೌಲಭ್ಯ ದೊರಕುವಂತಾಗಬೇಕು.ಆ ನಿಟ್ಟಿನಲ್ಲಿ ಪಂಚಾಯ್ತಿ ಪಿಡಿಓ ಗಮನಹರಿಸಬೇಕು ಅದು ಬಿಟ್ಟು ಪಂಚಾಯ್ತಿ ಸದಸ್ಯರಿಗೆ ವಿರೋದವಿದ್ದಾರೆಂದು ಅವರ ಮನೆಗೆ ಕಡಿತ ಗೊಳಿಸಿರುವುದು ನನ್ನ ಗಮನಕ್ಕೆ ಬಂದರೇ ನಿಮ್ಮಗಳನ್ನು ನೀರಿಲ್ಲದ ಊರಿಗೆ ವರ್ಗಾಯಿಸಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.

ಚುನಾವಣೆಯಲ್ಲಿ ಪಕ್ಷ ಗೆದ್ದಮೇಲೆ ಓಟು ಹಾಕಿದವರು ಹಾಕದವರು ಎಂಬ ಬೇಧಭಾವನೆ ಮಾಡದೇ ಎಲ್ಲರೂ ನಮ್ಮವರೇ ಎಂಬ ಭಾವನೆ ನನ್ನದು ಎಂದು ಹೇಳಿ ಈ ಹಿಂದಿನ ಶಾಸಕರು ಮತಹಾಕಿಲ್ಲ ಎಂಬ ಒಂದೇ ಕಾರಣದಿಂದಾಗಿ ಅಭಿವೃದ್ಧಿ ಪಡಿಸದೇ ನಿರ್ಲಕ್ಷö್ಯ ವಹಿಸಿರುವುದಾಗಿ ಹೇಳಿದ್ದಾರೆಂಬ ಬಗ್ಗೆ ನಾನು ಅದನಲ್ಲಾ ಹೇಳಲು ಹೋಗುವುದಿಲ್ಲ ನನಗೆ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಆಭಿವೃಧ್ದಿಗೆ ಅಧ್ಯತೆ ನೀಡುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಕೊಡಿಸಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಸರ್ಕಾರ ಚುನಾವಣೆಯ ವೇಳೆ ಘೋಷಿಸಲಾದ ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ಸ್ತಿçಶಕ್ತಿ ಯೋಜನೆಯಡಿ ೧೦೦ ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.ಉಳಿದಂತೆ ಎಲ್ಲ ಗ್ಯಾರಂಟಿಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುವಂತಾಗಿದೆ.ಇನ್ನೂ ಉಳಿದಂತೆ ಬರುವ ಬಜೆಟ್ ನಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹೇಳಿದ್ದಾರೆಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್,ಬಾಳೂರು ಗ್ರಾಮ ಪಂಚಾಯ್ತಿ ಆಧ್ಯಕ್ಷ ಶ್ರೀನಿವಾಸ್ ಆಚಾರ್,ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ,ಗಣಪತಿ,ಮಧುಸೂದನ, ಆಶೀಫ್‌ಭಾಷಾ, ಪ್ರಕಾಶಪಾಲೇಕರ್, ಲೀಲಾವತಿದೊಡ್ಡಯ್ಯ, ರವೀಂದ್ರ ಕೆರೆಹಳ್ಳಿ,ಸಣ್ಣಕ್ಕಿ ಮಂಜ ಹೊಸನಗರ, ಶಶಿಕಲಾ,ರೇಖಾ,ರಾಜಪ್ಪ,ಪಿಡಿಓ ಭರತ್ ಇನ್ನಿತರ ಗ್ರಾಮಸ್ಥರು ಪಕ್ಷ ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular