ಗದಗ : ಲಕ್ಷ್ಮೇಶ್ವರ ತಾಲೂಕಿನ ಯತ್ತಿಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳತನ ಮಾಡಿದ ಕಳ್ಳರನ್ನು ದೇವಸ್ಥಾನದ ಕಂಬಕ್ಕೆ ಕಟ್ಟಿ ಕಳ್ಳನ ಹೆಗಲ ಮೇಲೆ ಇನ್ನೊಬ್ಬ ಕಳ್ಳನಿಗೆ ನಿಲ್ಲಿಸಿ ಥಳಿಸಿದ ಘಟನೆ ನೆಡೆದಿದೆ. ಸಾಮಾಜಿಕಜಾಲತನದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಯಾವಾಗ ದೈನಂದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತದೋ ಅವಾಗ ಕಳ್ಳರ ಹಾವಳಿ ಕೂಡ ಹೆಚ್ಚಾಗುತ್ತದೆ .ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿಗೆ ಬಂಪರ್ ಬೆಲೆ ಬರುತ್ತಿದ್ದಂತೆಯೇ ಜಿಲ್ಲೆಯ ಜಮೀನಿನಲ್ಲಿನ ಮೆಣಸಿನಕಾಯಿ ಬೆಳೆ ಕಳ್ಳತನ ಹೆಚ್ಚಾಗಿದೆ. ಬೆಳೆ ಕಾಯ್ದುಕೊಳ್ಳಲು ರೈತ ಹರಸಾಹಸ ಪಡುವಂತಾಗಿದೆ.
ಉತ್ತರ ಕರ್ನಾಟಕ ,ವಾಯುವ್ಯ ಕರ್ನಾಟಕದಲ್ಲಂತೂ ಕೇಳೋದೇ ಬೇಡ ,ಜಿಲ್ಲೆಯ ರೋಣ,ಮುಂಡರಗಿ ಲಕ್ಷ್ಮೇಶ್ವರ ಗಜೇಂದ್ರಗಡ ತಾಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಹೆಚ್ಚುತ್ತಲೇ ಕಳ್ಳರು ರೈತರ ಜಮೀನಿನಲ್ಲಿರುವ ಮೆಣಸಿನಕಾಯಿ ಎಗರಿಸುತ್ತಿದ್ದಾರೆ.
ಮೆಣಸಿನಕಾಯಿಯನ್ನು ಗಿಡದಿಂದ ಬೇರ್ಪಡಿಸಿ ಒಣಗಲು ಹಾಕಿರುವ ಜಮೀನುಗಳು ಈ ಕಳ್ಳರ ಟಾರ್ಗೆಟ್ ಆಗಿವೆ. ಕೆಲ ಕಡೆಯಂತೂ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲು ಟ್ರಾಕ್ಟರ್ನಲ್ಲಿ ಹಾಕಿದ ನಂತರವೂ ಕಳ್ಳತನ ಮಾಡಿದ ಪ್ರಕರಣಗಳು ನಡೆದಿವೆ.ಮೆಣಸಿನಕಾಯಿ ಬೆಳೆದಿರುವ ಜಮೀನುಗಳಿಗೆ ಹತ್ತಾರು ಸಂಖ್ಯೆಯಲ್ಲಿ ಟ್ರಾö್ಯಕ್ಟರ್ನೊಂದಿಗೆ ನುಗ್ಗುವ ಕಳ್ಳರು ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ನಲ್ಲಿ ಹಾಕಿಕೊಂಡು ಮಾಯವಾಗುತ್ತಿದ್ದಾರೆ. ಇದನ್ನು ಕಾಯಲು ಪ್ರತಿ ಜಮೀನಿಗೆ ಹತ್ತಾರು ಆಳುಗಳನ್ನು ನೇಮಕ ಮಾಡುತ್ತಿದ್ದಾರೆ. ಆದರೂ ಕಾವಲುಗಾರರ ಕಣ್ಣು ತಪ್ಪಿಸಿ ಎಗರಿಸುತ್ತಿರುವದು ರೈತರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.ಇಲ್ಲಿಯವರೆಗೆ ಜಮೀನಿನಲ್ಲಿನ ಬೆಳೆ ಕಾಯಲು ರೈತರು ಜಮೀನಿನ ಮಧ್ಯದಲ್ಲಿ ಬೆದರುಗೊಂಬೆ ನಿಲ್ಲಿಸುತ್ತಿದ್ದರು.
ಕಳ್ಳರು ಈ ಬೆದರುಗೊಂಬೆಗಳನ್ನು ನೋಡಿ ಜಮೀನಿನಲ್ಲಿನ ರೈತರು ಎಚ್ಚರವಾಗಿದ್ದಾರೆಂದು ಭಾವಿಸಿ ಕಳ್ಳತನಕ್ಕೆ ಮುಂದಾಗುತ್ತಿರಲಿಲ್ಲ. ಪ್ರಸ್ತುತ ಚಾಲಾಕಿ ಕಳ್ಳರು ಒಂದು ಹೆಜ್ಜೆ ಮುಂದೆ ಹೋಗಿ ಟಾರ್ಚ್ನಿಂದ ಬೆದರುಗೊಂಬೆಗಳಿಗೆ ಬೆಳಕು ಬಿಡುತ್ತಾರೆ. ಒಂದು ವೇಳೆ ಟಾರ್ಚ್ ಲೈಟ್ ಬೆಳಕಿಗೆ ಆ ಕಡೆಯಿಂದ ಯಾವದೇ ಧ್ವನಿ ಬಾರದಿದ್ದಲ್ಲಿ ಕಳ್ಳತನ ಮಾಡುತ್ತಿದ್ದಾರೆಂದು ಕೃಷಿಕರು ಮಾಧ್ಯಮ ಪ್ರತಿನಿಧಿ ಮುಂದೆ ಅಳಲು ತೋಡಿಕೊಂಡಿದ್ದಾರೆ