ಮಂಗಳೂರು : ಮನುಷ್ಯ ಸತ್ತ ಮೇಲೆ ಬೆಲೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ,ಆಸ್ಪತ್ರೆಯ ಶವಾಗಾರದಲ್ಲಿ ಕೊಳೆಯದಂತೆ ಕಾಯ್ದಿಡಲು ನೀಡಿದ್ದ ಶವವನ್ನು ಕೊಳೆಸಿದ ಕಾರಣಕ್ಕಾಗಿ ಮೃತರ ಉತ್ತರಾಧಿಕಾರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನಾಯ್ಯಾಲಯವು ನಗರದ ಆಸ್ಪತ್ರೆಯೊಂದಕ್ಕೆ ಆದೇಶಿಸಿದೆ.
ಇದು ಆಸ್ಪತ್ರೆಯ ನಿರ್ಲಕ್ಷ್ಯ ಎಂದು ಹೇಳಬಹುದು,ವಿಲ್ಸನ್ ಆಲನ್ ಫರ್ನಾಂಡಿಸ್ ಎಂಬುವವರು 2019 ಅಕ್ಟೋಬರ್ 25 ರಂದು ನಿಧನರಾಗಿದ್ದರು. ದೂರದಲ್ಲಿರುವ ಸಂಬಂದಿಕರು ಬರುವ ತನಕ ಶವ ಕೊಳೆಯದಂತೆ ಕಾಯ್ದಿಡಲು ಮೃತರ ಕುಟುಂಬದವರು ಆಸ್ಪತ್ರೆಯ ಶವಾಗಾರವೊಂದರಲ್ಲಿ ಮೃತದೇಹವನ್ನು ಇಟ್ಟಿದ್ದರು. ಇದಕ್ಕಾಗಿ ಆಸ್ಪತ್ರೆಗೆ ಹಣವನ್ನೂ ಪಾವತಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ಅ.27 ರಂದು ಕರೆ ಮಾಡಿ ಶವ ಕೊಳೆತಿರುವುದನ್ನು ತಿಳಿಸಿದ್ದರು. ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಶವವು ಕೊಳೆತು ಮುದ್ದೆಯಾಗಿ ದುರ್ವಾಸನೆ ಬರುತ್ತಿತ್ತು.
ಈ ಬಗ್ಗೆ ಕೇಳಿದಾಗ ಆಸ್ಪತ್ರೆಯವರು ವಿದ್ಯುತ್ ನಿಲುಗಡೆಯ ಕಾರಣ ನೀಡಿದ್ದರು. ಈ ಸಂಬAಧ ಪೊಲೀಸ್ ದೂರನ್ನು ಸಹ ನೀಡಲಾಗಿತ್ತು. ಮೃತ ವ್ಯಕ್ತಿಯ ಸಹೋದರ ಮಂಗಳೂರು ಪೆರ್ಮನ್ನೂರಿನ ನೆಲ್ಸನ್ ಫರ್ನಾಂಡಿಸ್ ಅವರು ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು’ ಎಂದು ದೂರದಾರರ ಪರ ವಾದಿಸಿದ್ದ ವಕೀಲ ದಿನೇಶ್ ಭಂಡಾರಿ ತಿಳಿಸಿದ್ದಾರೆ.
ಆಸ್ಪತ್ರೆ ಹಾಗೂ ದೂರುದಾರರ ವಾದ ಆಲಿಸಿದ ಗ್ರಾಹಕರ ನ್ಯಾಯಾಲಯವು ಮೃತರ ಉತ್ತರಾಧಿಕಾರಿಗೆ ೫ ಲಕ್ಷ, ಪರಿಹಾರ ನೀಡುವಂತೆ ಆದೇಶಿಸಿದೆ. ಪರಿಹಾರ ಮೊತ್ತವನ್ನು 1 ತಿಂಗಳ ಒಳಗೆ ಪಾವತಿಸದೇ ಇದ್ದಲ್ಲಿ ಆ ಮೊತ್ತಕ್ಕೆ ಶೇ.೮ರಷ್ಟು ಬಡ್ಡಿ ಸೇರಿಸಿ ನೀಡಬೇಕೆಂದು ಹೇಳಿದೆ’ ಎಂದೂ ಅವರು ತಿಳಿಸಿದ್ದಾರೆ.


