ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದ ಸೊಸೆ ಸುಶೀಲ (42 ವರ್ಷ) ಮತ್ತು ಅತ್ತೆ ಹುಚ್ಚಮ್ಮ (75 ವರ್ಷ) ಎಂಬುವರೇ ಸಾವಿನಲ್ಲೂ ಒಂದಾಗಿ ಸಾರ್ಥಕತೆ ಕಂಡ ದುರ್ದೈವಿಗಳಾಗಿದ್ದಾರೆ.
ತಾಯಿ ಹುಚ್ಚಮ್ಮಗೆ ಐವರು ಗಂಡು, ಒಂದು ಹೆಣ್ಣು ಸೇರಿ ಒಟ್ಟು 6 ಜನ ಮಕ್ಕಳು,ಹುಚ್ಚಮ್ಮಳ ಎರಡನೇ ಮಗನ ಸೊಸೆಯಾಗಿದ್ದ ಸುಶೀಲ ಆಗಿದ್ದು ಅವರಿಗೆ ಎರಡು ಗಂಡು ಇದ್ದರು.ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದಿದ್ದ ಸೊಸೆ ಸುಶೀಲ ಗುರುವಾರ ರಾತ್ರಿ ದಿಢೀರ್ ಸಾವನ್ನಪ್ಪಿದ್ದಾರೆ.
ಈ ಐದು ಜನ ಅಣ್ಣ-ತಮ್ಮಂದಿರು ಒಟ್ಟಿಗೆ ಅವಿಭಕ್ತ ಕುಟುಂಬದಲ್ಲಿ 30 ಕ್ಕೂ ಹೆಚ್ಚು ಜನರಿದ್ದು
ಗಂಡ ಮತ್ತು ಎರಡು ಮಕ್ಕಳು ಸೇರಿದಂತೆ ಸೊಸೆ ಸುಶೀಲ ಆಪಾರ ಬಳಗ ಹೊಂದಿದ್ದರು. ಅತ್ತೆ-ಸೊಸೆಯಂತೆ ಇರುವ ಬದಲು ತಾಯಿ-ಮಗಳಂತೆ ಭಾವನಾತ್ಮಕ ಸಂಬಂಧದಿಂದಿದ್ದ ಹುಚ್ಚಮ್ಮ-ಸುಶೀಲಾ ಇದ್ದಿದ್ದರು ಎಂದು ತಿಳಿಯಲಾಗಿದೆ.ಅತ್ತೆ-ಸೊಸೆ ಸಾವಿನಿಂದ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.


