ಪುತ್ತೂರು ; ರಾಜ್ಯ ಕಾಂಗ್ರೇಸ್ ಸರಕಾರ ಹಿಂದೂ ಕಾರ್ಯಕರ್ತರ ವಿರುದ್ಧ ಗಡಿಪಾರು ನೊಟೀಸ್ ಜಾರಿಗೊಳಿಸಿದ ಬಗ್ಗೆ ಅಕ್ರೋಶಗೊಂಡ ವಿಶ್ವಹಿಂದೂ ಪರಿಷತ್, ಹಾಗೂ ಬಜರಂಗದಳ ಕಾರ್ಯಕರ್ತರು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದರು.
ದೇಶಕ್ಕಾಗಿ ಬಜರಂಗದಳದ ಕಾರ್ಯಕರ್ತರು ರೌಡಿಯಾಗಲು ಯಾವತ್ತೂ ಸಿದ್ಧ, ಬಜರಂಗದಳದ ಕಾರ್ಯಕರ್ತರು ಅತ್ಯಾಚಾರ,ದರೋಡೆ ಮಾಡಿ ರೌಡಿ ಪಟ್ಟ ಕಟ್ಟಿಕೊಂಡವರಲ್ಲ,ಗೋ ಮಾತೆ, ನಮ್ಮ ಅಕ್ಕ-ತಂಗಿಯಂದಿರ ರಕ್ಷಣೆಗಾಗಿ ಕೇಸು ಹಾಕಿಸಿಕೊಂಡವರು,ಈ ಹೋರಾಟಗಳು ನಿರಂತರವಾಗಿ ನಡೆಯಲಿದೆ,ಹಿಂದೂ ಕಾರ್ಯಕರ್ತರನ್ನ ಗಡಿಪಾರು ಮಾಡಿದರೆ ಹಿಂದೂ ಸಂಘಟನೆಗಳನ್ನು ವಿಚಲಿತಗೊಳಿಸಬಹುದು ಎನ್ನುವ ಭ್ರಮೆ ಬೇಡ,ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಈ ರೀತಿಯ ಕೃತ್ಯ ಮಾಡಬೇಡಿ,ನಮ್ಮ ಕಾರ್ಯಕರ್ತರನ್ನು ಗಡಿಪಾರು ಮಾಡಿದಲ್ಲಿ ಸಂಘಟನೆಯಿಂದ ದೂರ ಉಳಿಯುತ್ತಾರೆ ಎಂದು ಸರಕಾರ, ಪೊಲೀಸ್ ಇಲಾಖೆ ತಿಳಿದುಕೊಂಡಿದೆ ಇದು ಯಾವತ್ತೂ ಸಾಧ್ಯವಿಲ್ಲ ಎಂದು ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಸುನಿಲ್.ಕೆ.ಆರ್ ಹೇಳಿದ್ದಾರೆ.
ಕಾರ್ಯಕರ್ತರ ಮೇಲಿನ ಗಡಿಪಾರು ನೊಟೀಸ್ ತಕ್ಷಣ ವಾಪಾಸು ಪಡಿಯಬೇಕು,ತಪ್ಪಿದಲ್ಲಿ ಮುಂದಿನ ದಿನ ಉಗ್ರ ಹೋರಾಟ ನಡೆಸಲಾಗುವುದೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


