ಪುತ್ತೂರು : ಕಳೆದ ಒಂದು ವಾರದಿಂದ ಪುತ್ತೂರಿನಲ್ಲಿ ತಲವಾರಿನದೇ ಸದ್ದು. ಪುತ್ತೂರು ಪೇಟೆಯ ಮುಕ್ರಂಪಾಡಿಯಲ್ಲಿ ಶುಕ್ರವಾರ ಸಾರ್ವಜನಿಕವಾಗಿ ಕತ್ತಿ ಪ್ರದರ್ಶಿಸಿದ ಆರೋಪದ ಮೇಲೆ ಪುತ್ತೂರು ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನೀವಾಸಿಗಳಾದ ದಿನೇಶ್ ಪಂಜಿಗ (38), ಭವಿತ್ (19), ಮನ್ವಿತ್ (19), ಜಯಪ್ರಕಾಶ್ (18), ಚರಣ್ (23), ಮನೀಶ್ (23) ಮತ್ತು ವಿನೀತ್ (19) ಎಂದು ಗುರುತಿಸಲಾಗಿದೆ.
ಏಳು ಮಂದಿ ಮತ್ತು ಇಬ್ಬರು ಅಪ್ರಾಪ್ತರು ಪುತ್ತಿಲ ಪರಿವಾರದ ಕಚೇರಿಗೆ ಕತ್ತಿ ಹಿಡಿದು ಬಂದು ಮನೀಶ್ ಎಂಬಾತನನ್ನು ಕೊಲೆ ಮಾಡುವುದಾಗಿ ದೂರಿನಲ್ಲಿ ವಿಜೀತ್ ಕುಮಾರ್ ಹೇಳಿದ್ದಾರೆ. ವಿಜೀತ್ ಮತ್ತು ಆತನ ಸಹೋದ್ಯೋಗಿ ಅನಿಲ್ ಮಹಾಬಲ ಶೆಟ್ಟಿ ಅವರನ್ನು ನಿಂದಿಸಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 144, 147,148,352,504, 506 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


