ಗಂಗಾವತಿ : ಜಾತಿ ಗಣತಿ ಮನೆಯಲ್ಲಿಯೇ ಕುಳಿತು ತಯಾರಿಸಲಾಗಿದ್ದು, ಇದಕ್ಕೆ ತಮ್ಮ ವಿರೋಧ ಇದೆ ಎಂಬ ಹಿರಿಯ ಶಾಸಕ ಶಾಯನೂರು ಶಿವಶಂಕ್ರಪ್ಪ ಅವರ ನಿಲುವು ಬೆಂಬಲಿಸಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ, ಜಾತಿ ಗಣತಿಗೆ ತಮ್ಮದೂ ವಿರೋಧವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ ಕರಡಿ ಸಂಗಣ್ಣ, ಸಚಿವ ಶಿವರಾಜ ತಂಗಡಗಿ ಹೇಳಿಕೆ ಪ್ರಕಾರ ಕಾಂತರಾಜು ವರದಿ ಕೇವಲ ಶೈಕ್ಷಣಿಕ, ಆಥರ್ಿಕ ಮತ್ತು ಶೈಕ್ಷಣಿಕ ವರದಿ ಮಾತ್ರ/ ಅದು ಜಾತಿ ಆಧಾರಿತ ಸಮೀಕ್ಷೆ ಅಲ್ಲ ಎಂದು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕ್ರಪ್ಪ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮನೆಯಲ್ಲಿ ಕುಳಿತು ವರದಿ ನೀಡಲಾಗಿದೆ. ಇದು ವೈಜ್ಞಾನಿಕ ಸಮೀಕ್ಷೆ ಅಲ್ಲ. ಮರು ಸಮೀಕ್ಷೆ ಮಾಡಿ ಎಂದು ಹೇಳಿದ್ದಾರೆ. ಇದಕ್ಕೆ ತಮ್ಮ ಬೆಂಬಲವೂ ಇದೆ ಎಂದು ಸಂಸದ ಹೇಳಿದರು.
ಸಮೀಕ್ಷೆ ಸರಿಯಾಗಿ ಆಗದೇ ಹೋದಲ್ಲಿ ಕೇವಲ ವೀರಶೈವ ಸಮಾಜ ಮಾತ್ರವಲ್ಲ, ಇತರೇ ಜನಾಂಗಕ್ಕೂ ಸಮಸ್ಯೆಯಾಗಲಿದೆ. ಅಂಕಿಸಂಖ್ಯೆಯಲ್ಲಿ ಲೋಪದೋಷಗಳಾದರೆ ಅದರ ಪರಿಣಾಮ ಸಮಾಜದ ಮೇಲೂ ಆಗಲಿದೆ. ಹೀಗಾಗಿ ನಮ್ಮ ನಿಲುವು ಕೂಡ ಶಾಮನೂರು ಅವರ ಹೇಳಿಕೆಯನ್ನು ಬೆಂಬಲಿಸಿ ಇದೆ ಎಂದರು.
ಬೋರ್ವೆಲ್ ಪರಿಕರ ಕೊಡಿ:
ರೈತ ತನ್ನ ಜಮೀನಿಗೆ ಬೋರ್ವೆಲ್ ಹಾಕಿಸಿಕೊಂಡಾಗ ಐಪಿ ಸೆಟ್ಗೆ ಬೇಕಾಗುವ ವಿದ್ಯುತ್ ಪರಿಕರಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಈ ಹಿಂದಿನ ಬಿಜೆಪಿ ಮತ್ತು ಆದರ ಆಚೆಗಿನ ಕಾಂಗ್ರೆಸ್ ಸಕರ್ಾರದ ಅವಧಿಯಲ್ಲಿ ಇತ್ತು. ಆದರೆ ಸಿದ್ದರಾಮಯ್ಯ ನೇತೃತ್ವದಲ್ಲಿನ ಸಕರ್ಾರ ಆ ವ್ಯವಸ್ಥೆ ಕೈಬಿಟ್ಟಿದೆ ಎಂದು ಸಂಸದ ಆರೋಪಿಸಿದರು.
ಈ ಮೊದಲಿದ್ದ ವ್ಯವಸ್ಥೆಯನ್ನು ಸಿದ್ದರಾಮಯ್ಯ ನೇತೃತ್ವದಲ್ಲಿನ ಸಕರ್ಾರ ಜಾರಿ ಮಾಡಬೇಕು. ಇತ್ತೀಚೆಗೆ ಜಾರಿ ಮಾಡಿರುವ ಆದೇಶ ಹಿಂಪಡೆಯಬೇಕು. ಈ ಆದೇಶ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿರು.
ಸರಕಾರದ ಆದೇಶ ಹಿಂಪಡೆಯಬೇಕು ಎಂಬ ಕಾರಣಕ್ಕೆ ನಾನು ಕೈಗೊಂಡಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಕೊಟ್ಟ ಮಾತು ಉಳಿಸಿಕೊಳ್ಳಿ:
ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಈ ಕಾಂಗ್ರೆಸ್ ಸಕರ್ಾರಕ್ಕೆ ನಿಜವಾಗಿಯೂ ರೈತರಪರವಾಗಿ ಕಾಳಜಿ ಇದ್ದರೆ ತಕ್ಷಣ ಈ ಹಿಂದಿನ ಆದೇಶ ಜಾರಿ ಮಾಡಬೇಕು. ಈ ಬಗ್ಗೆ ಮಾತುಕೊಟ್ಟ ಶಿವರಾಜ ತಂಗಡಗಿ, ವಿಶ್ವಾಸ ಉಳಿಸಿಕೊಳ್ಳಬೇಕು.
ಕೊಪ್ಪಳ ಜಿಲ್ಲೆಯಲ್ಲಿ 5600 ಅನಧಿಕೃತ ಪಂಪ್ಸೆಟ್ಗಳಿದ್ದು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಎಲ್ಲಾ ಪಂಪ್ಸೆಟ್ಗಳಿಗೆ ಆರ್.ಆರ್. ನಂಬರ್ ಕೊಡಿಸುವುದಾಗಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಈ ಮಾತನ್ನು ಉಳಿಸಿಕೊಳ್ಳಬೇಕು ಎಂದು ಸಂಸದ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಇದ್ದರು.