Saturday, July 25, 2026
Homeಜಿಲ್ಲೆಪುತ್ತೂರು : ಪುತ್ತಿಲ ಪರಿವಾರ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ತಲ್ವಾರ್ ಕಾಳಗ.

ಪುತ್ತೂರು : ಪುತ್ತಿಲ ಪರಿವಾರ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ತಲ್ವಾರ್ ಕಾಳಗ.

ಪುತ್ತೂರು : ಪುತ್ತಿಲ ಪರಿವಾರ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ನಡುವೆ ತಲ್ವಾರ್ ಕಾಳಗ ನಡೆದಿದೆ, ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಗೆ ನುಗ್ಗಲು ಯತ್ನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು,ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ ತಂಡದಿಂದ ಎಂದು ತಿಳಿದು ಬಂದಿದೆ.

ಪುತ್ತೂರು ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರು ಜಮಾಯಿಸುತ್ತಿದ್ದು ,ತಲ್ವಾರ್ ತೋರಿಸಿ ಮನೀಶ್ ಕುಲಾಲ್ ಮೇಲೆ ಹಲ್ಲೆಗೆ ಯತ್ನ ನಡೆಸಿದ ದಿನೇಶ್ ಪಂಜಿಗನನ್ನ ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತೆ ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯ ವೈಫ್ಯಲ್ಯತೆ ,ಕಳೆದೆರಡು ದಿನಗಳ ಹಿಂದೆ ನಡೆದಿತ್ತು ಅಕ್ಷಯ್ ಕಲ್ಲೆಗ ಹತ್ಯೆ ನಡೆದಿತ್ತು ,ಇದಾದ ಎರಡೇ ದಿನದಲ್ಲಿ ಮತ್ತೆ ಪುತ್ತೂರು ನಗರದಲ್ಲಿ ತಲ್ವಾರ್ ಕಾಳಗ ನಡೆದಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ತಲ್ವಾರ್ ಕಾಳಗದ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಕಾರಣ ಎಂಬ ಮಾಹಿತಿ ಬಲ್ಲ ಮೂಲಗಳಿಂದ ದೊರೆತಿದೆ.

ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಯ ವಿಚಾರವಾಗಿ ಯುವಕ ಹತ್ತಕ್ಕೂ ಅಧಿಕ ಮಂದಿಯ ಜತೆಗೆ ಮಾರಕಾಯುಧ ಸಹಿತ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಛೇಯ ಬಂದು ಕಛೇರಿಗೆ ಬರಲು ಹೇಳಿದೆಯಲ್ಲ ಎಂದು ಹೇಳಿಕೊಂಡು ಮನೀಶ್ ಕುಲಾಲ್ ಗಾಗಿ ಹುಡುಕಾಡಿದ್ದಾರೆ. ಆದರೆ ಆತ ಅಲ್ಲಿರಲಿಲ್ಲ, ಕೃಷ್ಣ ಪ್ರಾಸ್ ಶೆಟ್ಟಿ, ಅನಿಲ್ ತೆಕಿಲ ಹಾಗೂ ವಿಜೇತ್ ಜತೆಗಿದ್ದರು.ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಬಿಜೆಯ ಜತೆಗೆ ಗುರುತಿಸಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular