Saturday, July 25, 2026
Homeಕ್ರೈಂಗೋಕಾಕ : ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಹತ್ಯೆ : ದುಷ್ಕರ್ಮಿಗಳು ಪರಾರಿ.

ಗೋಕಾಕ : ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಹತ್ಯೆ : ದುಷ್ಕರ್ಮಿಗಳು ಪರಾರಿ.

ಗೋಕಾಕ : ಕಂಪನಿಯೊಂದರ ಕೆಲಸ ಮುಗಿಸಿಕೊಂಡು ವಾಪಸ್ ಬೈಕ್​​ನಲ್ಲಿ ತಮ್ಮ ಮನೆಗೆ ವಾಪಸಾಗುತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಶಿವಾಪೂರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪದ ನಿನ್ನೆ ರಾತ್ರಿ 8.30 ಕ್ಕೆ ನಡೆದಿದೆ. ಶಿವಶಂಕರ ಶಿವಪುತ್ರ ಮಗದುಮ್ಮ ಸಾವಳಗಿಯ ಮುತ್ನಾಳ ನಿವಾಸಿ (35) ಮೃತ ಯುವಕ.

ಮೃತನ ಕೊಲ್ಲಲು ಮೊದಲೇ ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ರಸ್ತೆ ಬದಿಯಲ್ಲಿ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನು ಬೈಕ ಮೇಲೆ ಬರುತ್ತಿದ್ದ ಹಾಗೆ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ರಾತ್ರಿ ಅಟ್ಯಾಕ ಮಾಡಿದ್ದಾರೆ. ಜನನಿಬಿಡವಾದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗಾವಿ ರಿಲಯನ್ಸ್ ಕಂಪನಿಯೊಂದರಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಶಂಕರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸಿಪಿಐ ಗೋಪಾಲ್ ರಾಥೋಡ್ ಪಿಎಸ್ಐ ಕಿರಣ್ ಮೋಹಿತ್ ಹಾಗೂ ಪೊಲೀಸ್ ಸಿಬ್ಬಂದಿಗಳು ಆರೋಪಿಗಳಿಗೆ ಬಲೆ ಬಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular