ಗಂಗಾವತಿ : ತಾಲ್ಲೂಕಿನ ಚಿಕ್ಕರಾಂಪೂರದಲ್ಲಿರುವ ಪ್ರಮುಖ ಧಾಮರ್ಿಕ ತಾಣ ಅಂಜನಾದ್ರಿ ದೇಗುಲದಲ್ಲಿ ಶುಕ್ರವಾರ ನಡೆದ ಹುಂಡಿ ಎಣಿಕೆಯಲ್ಲಿ ಒಂದು ವಿದೇಶ ನೋಟು ಸೇರಿದಂತೆ ವಿವಿಧ ದೇಶಗಳ ಒಟ್ಟು ಎಂಟು ನಾಣ್ಯಗಳು ಪತ್ತೆಯಾಗಿವೆ.
ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಹುಂಡಿಯಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗಿದ್ದ ಹಣ ಎಣಿಕೆ ಕಾರ್ಯ ಶುಕ್ರವಾರ ತಹಸೀಲ್ದಾರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ ಅಮೆರಿಕಾದ (ಯುಎಸ್ಎ) ಒಂದು ಡಾಲರ್, ಯುಕೆ, ಜಪಾನ್, ನೇಪಾಳ, ಮಲೇಶಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಣ ಕೋರಿಯಾ ಸೇರಿದಂತೆ ಏಳು ದೇಶಗಳ ಒಟ್ಟು ಎಂಟು ವಿವಿಧ ಮುಖಬೆಲೆಯ ನಾನ್ಯಗಳು ಪತ್ತೆಯಾಗಿವೆ.
27 ಲಕ್ಷ ಸಂಗ್ರಹ:
ಹುಂಡಿಯಲ್ಲಿ ಒಟ್ಟು ರೂಪಾಯಿ 27,16 ಲಕ್ಷ ಮೊತ್ತವು ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಬಾರಿ ಹಣ ಎಣಿಕೆ ಮಾಡಿದ್ದಾಗ 31,77 ಲಕ್ಷ ರೂಪಾಯಿ ಮೊತ್ತದ ಹಣಸ ಂಗ್ರಹವಾಗಿತ್ತು. ಇದೀಗ 44 ದಿನಕ್ಕೆ 27,16 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.
ಹುಂಡಿಯಲ್ಲಿನ ಹಣದ ಎಣಿಕೆ ಕಾರ್ಯಕ್ಕೆ ಕಂದಾಯ ಇಲಾಖೆ ಮತ್ತು ದೇವಸ್ಥಾನದ ಒಟ್ಟು 40ಕ್ಕೂ ಹೆಚ್ಚು ಸಿಬ್ಬಂದಿಗಳನ್ನ ನಿಯೋಜಿಸಲಾಗಿತ್ತು. ಸತತ ಐದು ಗಂಟೆಗೂ ಹೆಚ್ಚು ಕಾಲ ಹಣದ ಎಣಿಕೆ ಕಾರ್ಯ ನಡೆಯಿತು. ಭಕ್ತರ ನಾನಾ ಬೇಡಿಕೆ ಈಡೇರಿಕೆ ಪ್ರಾಥರ್ಿಸಿ ಚೀಟಿಗಳನ್ನು ಹಾಕಿದ್ದು ಕಂಡು ಬಂತು.