ರಿಪ್ಪನ್‌ಪೇಟೆ : ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು ಸಾಗರ ಹೊಸನಗರ ತೀರ್ಥಹಳ್ಳಿ ಶಿಕಾರಿಪುರ ಸೊರಬ ತಾಲ್ಲೂಕ್ ಸೇರಿದಂತೆ ನೂರಾರು ಗ್ರಾಮಗಳಿಗೆ ಕೆಂಪು ಬಸ್‌ಗಳಲೇ ಇಲ್ಲದಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ನೆವಟೂರು ಗ್ರಾಮದಲ್ಲಿ ಆ ಯೋಜಿಸಲಾದ ಬಾಳೂರು ಮತ್ತು ಕೆಂಚನಾಲ ಬೂತಗಳ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿ ಬಿ.ಜೆ.ಪಿ.ತತ್ವ ಸಿದ್ದಾಂತದ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವ ಶಿಸ್ತಿನ ಪಕ್ಷವಾಗಿದ್ದು ಕಾರ್ಯಕರ್ತರ ಪರಿಶ್ರಮದಲ್ಲಿ ಪಕ್ಷವನ್ನು ಕಟ್ಟಿ ಬೆಳಸುವುದರೊಂದಿಗೆ ನಮ್ಮ ನಾಯಕರುಗಳು ತಪಸ್ಸು ಮಾಡಿದ್ದಾರೆಂದರು.ಕೇAದ್ರದ ಬಿಜೆಪಿ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಿ ಸಮಸ್ಯೆಗೆ ಪರಿಹಾರ ಕಂಡಕೊAಡಿರುವುದು ಮತ್ತು ಕೊರೂನಾ ಸಂಕಷ್ಟ ಪರಿಸ್ಥಿಯನ್ನು ಸಮರ್ಥವಾಗಿ ಎದುÀರಿಸಿರುವುದು ಸೇರಿದಂತೆ ೫ ದಶಕದ ಹೋರಾಟದಿಂದಾಗಿ ಅಯೋದ್ಯಯಲ್ಲಿ ಶ್ರೀ ರಾÀಮ ಮಂದಿರವನ್ನು ನಿರ್ಮಿಸುವ ಮೂಲಕ ಬರುವ ಜನವರಿ ೨೬ ರಂದು ಲೋಕಾರ್ಪಣೆ ಮಾಡಲಾಗುತ್ತಿರುವುದು ದೇಶಕ್ಕೆ ಹೆಮ್ಮಯ ವಿಷಯವೆಂದ ಅವರು ರಾಜ್ಯದಲ್ಲಿ ಇಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಯಡಿ ೨೦೦ ಯುನಿಟ್ ಉಚಿತ ವಿದ್ಯುತ್ ಈಗ ದುಪ್ಪಟ್ಟು ಹಣ ವಸೂಲಿ ಮಾಡುವ ಮೂಲಕ ಪವರ್ ಕಟ್ ಮಾಡುವುದರಿಂದಾಗಿ ಮಳೆಯಿಲ್ಲದೆ ರೈತರು ತಮ್ಮ ಜಮೀನಿಗೆ ನೀರು ಹರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ರಾಜ್ಯಸರ್ಕಾರ ರೈತರ ಕಂದಾಯ ಜಮೀನಿಗೆ ಉಪಸಮಿತಿಯನ್ನು ರಚಿಸುವ ಮೂಲಕ ಅರಣ್ಯ ಕಾಯ್ದೆಯನ್ವಯ ಕ್ರಿಮಿನಲ್ ಕೇಸ್ ದಾಖಲಿಸುವ ಕರಾಳ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಅರಣ್ಯ ಸಚಿವ ಈಶ್ವರಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿಕೆ ನೀಡಿರುವುದು ಸರ್ಕಾರದ ಮಂತ್ರಿಗಳಿಗೆ ಬುದ್ದಿ ಭ್ರಮಣೆಯಾದಂತಾಗಿದೆAದು ಅರೋಪಿಸಿ ಬರದ ನಿರ್ವಹಣೆಯಲ್ಲಿ ವಿಫಲಗೊಂಡಿರುವ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡುತ್ತಾ ರೈತನಾಗರೀಕರನ್ನು ಬೀದಿಗೆ ಬೀಳುವಂತೆ ಮಾಡಿದೆ ಟೀಕಿಸಿದರು.
ತಾಳಗುಪ್ಪ-ಶಿರಸಿ ರೈಲ್ವೆ ಸಂಪರ್ಕದ ಯೋಜನೆಗೆ ಸರ್ವೇ;-ಮೈಸೂರು-ಬೆಂಗಳೂರು ಶಿವಮೊಗ್ಗ ಸಾಗರ ತಾಳಗುಪ್ಪ ರೈಲ್ವೆ ಸಂಪರ್ಕವನ್ನು ಶಿರಸಿಯವರೆಗೂ ಮುಂದುವರಿಸುವ ಮೂಲಕ ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಾಗಿ ಈಗಾಗಲೇ ಕೇಂದ್ರದ ರೈಲ್ವೆ ಇಲಾಖೆಯವರಿಂದ ಸರ್ವೇ ಕಾರ್ಯ ಮುಗಿಸಲಾಗಿದ್ದು ಅನುಧಾನ ಸಹ ಬಿಡುಗಡೆಯಾಗಿದೆ ಶೀಘ್ರದಲ್ಲಿಯೇ ಟಂಡರ್ ಪ್ರಕ್ರಿಯರ ನಡೆಯಲಿದೆ.ಇನ್ನೂ ೨೫ ಸಾವಿರ ಕಿ.ಮೀ.ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಮಾಡಲಾಗಿದೆ.ಜಿಲ್ಲೆಯ ಸವಾಂಗೀಣ ಅಭಿವೃದ್ಧಿಗಾಗಿ ಬಿ.ವೈ.ರಾಘವೇಂದ್ರರನ್ನು ದೇಶದ ಸುಭದ್ರತೆಗಾಗಿ ಮೋಧಿಜಿ ಕೈ ಬಲಪಡಿಸಲು ಬಿಜೆಪಿ ಬೆಂಬಲಿಸಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಾಳೂರು ಬಿಜೆಪಿ ಬೂತ ಸಮಿತಿಯ ಅಧ್ಯಕ್ಷ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್,ತಾಲ್ಲೂಕ್ ಅಧ್ಯಕ್ಷ ಗಣಪತಿ ಬೆಳಗೋಡು,ಪಕ್ಷದ ಮುಖಂಡರಾದ ಬಿ.ಯುವರಾಜ್‌ಗೌಡರು ಚಿಕ್ಕಮಣತಿ,ಎನ್.ಆರ್.ದೇವಾನಂದ,ಎ.ವಿ.ಮಲ್ಲಿಕಾರ್ಜುನ,ಆರ್.ಟಿ.ಗೋಪಾಲ, ಜಿಲ್ಲಾ ಪಂಚಾಯಿತಿ ಮಾಜಿ.ಸದಸ್ಯ ಸುರೇಶ್ ಸ್ವಾಮಿ ರಾವ್ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್,ಲೀಲಾಶಂಕರ ಇನ್ನಿತರ ಹಲವರು ಹಾಜರಿದ್ದರು.


