Saturday, July 25, 2026
Homeರಾಜ್ಯಚಿತ್ರದುರ್ಗ ; ಭಕ್ತರು ಎಸೆದು ಹೋದ ಅನ್ನವನ್ನು ತಿಂದು 17 ಮೇಕೆಗಳು ಸಾವು.

ಚಿತ್ರದುರ್ಗ ; ಭಕ್ತರು ಎಸೆದು ಹೋದ ಅನ್ನವನ್ನು ತಿಂದು 17 ಮೇಕೆಗಳು ಸಾವು.

ಚಿತ್ರದುರ್ಗ ; ಚಳ್ಳಕೆರೆ ತಾಲೂಕಿನ ಗೌರಸಮುದ್ರ ಕಾವಲಿನಲ್ಲಿ ಮಾರಮ್ಮದೇವಿ ಜಾತ್ರೆ ನಡೆಯುವ ಸ್ಥಳದಲ್ಲಿ ಭಕ್ತರು ಅರಕೆ ತೀರಿಸಲು ಬಾಡೂಟ ಮಾಡಿ ಸವಿದು ಉಳಿದ ಅನ್ನವನ್ನು ಸ್ಥಳದಲ್ಲೇ ಎಸೆದು ಹೋಗಿದ್ದು . ಮೇಕೆಗಳು ಮೇಯಲು ಹೋದಾಗ ಈ ಅನ್ನವನ್ನು ತಿಂದು 17 ಮೇಕೆಗಳು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದು ,ಇನ್ನು ಮುಂದೆಯಾದರೂ ಭಕ್ತರು ದೇವಿಯ ಪ್ರಸಾದದ ಹೆಸರಿನಲ್ಲಿ ಊಟ ಮಾಡಿ ಎಲ್ಲೆಂದರಲ್ಲಿ ಎಸೆದು ಹೋದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ .ಇದರಿಂದ ರೈತರು ಕಂಗಾಲಾಗಿದ್ದು ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular