ಲಿಂಗಸುಗೂರು : ದುರಾಡಳಿತ ನೀಡಿ ಜನತೆಗೆ ಬೇಸರವಾಗಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಶಾಸಕ ಮಾನಪ್ಪ ವಜ್ಜಲ್ ಕಿಡಿಕಾರಿದರು.
ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಮಂಡಲವತಿಯಿAದ ರಾಜ್ಯ ಸರ್ಕಾರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರೈತರ ಪಂಪಸೆಟ್‌ಗಳಿಗೆ ಹಗಲು ಹೊತ್ತಲ್ಲಿ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು ಆದರೆ ಈಗಿನ ಸರ್ಕಾರ ಹಗಲು ಹೊತ್ತು ರಾತ್ರಿ ವೇಳೆ ಐದು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಬ್ರಷ್ಟಾಚಾರ ತಾಂಡವಾಡುತ್ತಿವೆ ಕಮಿಷನ್ ರಾಜಕಾರಣ ಶುರುವಾಗಿದೆ. ಲೋಕಸಭಾ ಚುನಾವಣೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡುತ್ತಿದೆ ಇದಕ್ಕೆ ತಾಜಾ ಉದಾಹರಣ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಕಂತೆಗಳೇ ಸಾಕ್ಷಿಯಾಗಿದೆ. ಐಟಿ ದಾಳಿ ವೇಳೆ ದೊರೆತ ಹಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಅದೋಗತಿಯಾಗಿದೆ ಯಾವುದೇ ಯೋಜನೆಗಳಿಗೆ ಅನುದಾನ ಇಲ್ಲದೇ ಅಭಿವೃದ್ಧಿ ಪಥ ಸಂಪೂರ್ಣ ಕುಸಿದಿದೆ ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೊರಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್,ರುದ್ರಗೌಡ ತುರಡಗಿ, ಜಗನ್ನಾಥ ಕುಲಕರ್ಣಿ, ಜೀವಲೆಪ್ಪ ನಾಯ್ಕ್, ಮಲ್ಲಪ್ಪ ಹೂಗಾರ, ಅಮರೇಶ ಮಡ್ಡಿ, ರಾಜು ತಂಬಾಕೆ, ಚೆನ್ನಬಸವ ಹಿರೇಮಠ,ಪರಶುರಾಮ ಕೆಂಭಾವಿ, ಸೇರಿದಂತೆ ಇನ್ನಿತರಿದ್ದರು


