ಮಂಗಳೂರು : ಇಸ್ರೇಲ್ ವಿರುದ್ಧದ ಭಯೋತ್ಪಾದಕ ಸಂಘಟನೆ ಹಮಾಸ್‌ನ ಗೆಲುವಿಗಾಗಿ ಜಿಲ್ಲೆಯ ವ್ಯಕ್ತಿಯೊಬ್ಬರು ವಿಶೇಷ ಪ್ರಾರ್ಥನೆಗೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. 30 ಸೆಕೆಂಡುಗಳ ವೀಡಿಯೊದಲ್ಲಿ, ತನ್ನನ್ನು ಮಂಗಳೂರಿನ ಖಬರ್ಸ್ತಾನ್ ಪ್ರೇಮಿ ಸಂಘದ ಸದಸ್ಯ ಜಾಕೀರ್ ಎಂದು ಗುರುತಿಸಿಕೊಂಡ ವ್ಯಕ್ತಿ, ಪ್ಯಾಲೆಸ್ತೀನ್, ಗಾಜಾ ನಿವಾಸಿಗಳು ಮತ್ತು ದೇಶಭಕ್ತ ಹಮಾಸ್ ಸೈನಿಕರಿಗಾಗಿ ತನ್ನ ಗುಂಪಿನ ಸದಸ್ಯರು ‘ದುವಾ’ (ವಿಶೇಷ ಪ್ರಾರ್ಥನೆ) ನಡೆಸುವಂತೆ ಮನವಿ ಮಾಡಿದ್ದಾರೆ. ತಾಲಿಬಾನಿಯಂತೆ ವೇಷ ಧರಿಸಿರುವ ಜಾಕಿರ್ ಈತನ ಮುಖ ಛಾಯೆ ಕೂಡ ತಾಲಿಬಾನ್ ಉಗ್ರ ರೂಪ ತರಹ ಇದ್ದು ,ಇವನು ಮಂಗಳೂರಿನಲ್ಲಿ ಉಗ್ರ ರೂಪಧಾರಿ ಎಂದೇ ಪ್ರಸಿದ್ದಿ ಪಡೆದಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಮು ಸೂಕ್ಷ್ಮವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಝಾಕಿರ್ ತಾನು ಮಂಗಳೂರು ನಗರದ ಬಂದರ್ ಪ್ರದೇಶದ ನಿವಾಸಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಹಮಾಸ್ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಠಾಣೆ ಪೊಲೀಸರು ಜಾಕಿರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಜಾಕಿರ್ ಅಲಿಯಾಸ್ ಝಾಕಿ (58) ಜೋಕಟ್ಟೆ ಮೂಲದವರಾಗಿದ್ದು, ಪ್ರಸ್ತುತ ಬಂದರ್‌ನಲ್ಲಿ ವಾಸವಾಗಿದ್ದಾರೆ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಉತ್ತರ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.