ಕಂಪ್ಲಿ : ಗ್ರಾಮಗಳಲ್ಲಿ ಯಾರಾದ್ರೂ ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ಎಲ್ಲಿ ಮಾಡಬೇಕು, ಜಾಗ ಎಲ್ಲಿದೆ ಎಂದು ಅಕ್ಕ ಪಕ್ಕದಲ್ಲಿ ಜನರು ಓಡಾಡಿಜಾಗ ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಕಂಪ್ಲಿ ಕ್ಷೇತ್ರದ ಬರುವ ದೊಡ್ಡ ಗ್ರಾಮದ ಎಮ್ಮಿಗನೂರಿನ ಗ್ರಾಪಂ ನ ಹಾವಿನಹಾಳ್ ರಸ್ತೆಯಲ್ಲಿ ಮಾರೆಮ್ಮ ಕ್ಯಾಂಪ್ ಹಾಗೂ ಬ್ರಾಹ್ಮಣಕ್ಯಾಂಪ್ ನಲ್ಲಿ ಸುಮಾರು ದಶಕ ವರ್ಷಗಳಿಂದ ರುದ್ರ ಭೂಮಿಯಿಲ್ಲ. ವಾಸಿಸುವ ಮನೆಗಳಿಗೆ ಪಟ್ಟಾ ಇಲ್ಲ ಇದರಿಂದ ಸಾರ್ವಜನಿಕರು ನಿತ್ಯ ಪರಿತಪ್ಪಿಸುತ್ತಿದ್ದಾರೆ ಇಲ್ಲಿನ 75 ಕ್ಕೂ ಹೆಚ್ಚು ಕುಟುಂಬಗಳು ನೆಲೆಯಾಗಿದ್ದು, ಅದರೆ ಕ್ಯಾಂಪ್ ನಲ್ಲಿ ಮೂಲ ಭೂತ ಸೌಕರ್ಯಗಳು ಅಷ್ಷೆಓಟಿಗಾಗಿ ನೆನಪು ಮಾತ್ರ ! ಪಟ್ಟಕ್ಕೆ ಮಾತ್ರ ಸಾಬೂಬು ಜನಪತ್ರತಿನಿಧಿಗಳು ಭಿಕ್ಷೆ ಬೇಡುತ್ತಿದ್ದಾರೆ.
ಸುಮಾರು ವರ್ಷಗಳಿಂದ ಎರಡು ಕ್ಯಾಂಪ್ ನಲ್ಲಿ ಸ್ಮಶಾನ ಇಲ್ಲದ ಪರಿಣಾಮ ಇಲ್ಲಿಯಾರೇ ಮೃತ ಪಟ್ಟರು ಮೊದಲು ಕಾಲುವೆ ಪಕ್ಕದಜಂಗಲ್ ನಲ್ಲಿ ಶವ ಸಂಸ್ಕಾರ ದುದೈವ ಮಾತು. ಸದ್ಯ ಕಾಲುವೆ ಪಕ್ಕದ ಜಾಗಗಳು ಒತ್ತುವರಿ ಯಾದ ಕಾರಣ ಕುಡಿಯುವ ನೀರಿನ ಕೆರೆಯ ಪಕ್ಕದಲ್ಲಿ ಶವಗಳನ್ನು ಹೂತು ಇಡುತಿದ್ದರು, ಕೆರೆಗೆ ಅನೇಕ ಜನರು ನೀರನ್ನುತೆಗೆದುಕೊಂಡು ಬರೋಕೆ ಬಂದು ಹೋಗುವುದರಿಂದಅಲ್ಲಿ ಶವಗಳನ್ನು ಹಿಡಬಾರದು ಎಂದು ಆರೋಪ ಮಾಡಿದ್ದರಿಂದ ಅಲ್ಲಿಂದ ಸತ್ತ ಶವಗಳನ್ನು ಶವ ಸಂಸ್ಕಾರ ಮಾಡುವುದು ಕ್ಯಾಂಪಿನ ಜನರಿಗೆ ತುಂಬಾಕಷ್ಟಕರ ವಾಗಿದೆ. ಕೆಲ ನಿವಾಸಿಗಳು ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣ ಶವಗಳನ್ನು ತಮ್ಮ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಹೂತು ಹಿಟ್ಟಿದ್ದಾರೆ.
ಭರವಸೆಗಳು ಹುಸಿ : ಮಾರೆಮ್ಮಕ್ಯಾಂಪ್ ಹಾಗೂ ಬ್ರಾಹ್ಮಣಕ್ಯಾಂಪ್ ನ ಜನರುರುದ್ರಭೂಮಿ ಕಲ್ಪಿಸಿ ಕೊಡುವಂತೆ ಸ್ಥಳೀಯ ಶಾಸಕ ಜೆ. ಎನ್. ಗಣೇಶ್ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಮತ್ತು ಸ್ಥಳೀಯ ಗ್ರಾಪಂ ಇಲಾಖೆಗೆ ಅನೇಕ ಭಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆಗೊಂಡಿಲ್ಲ ಕೇವಲ ಭರವಸೆಯಲ್ಲೇ ಕೈತೋಳೆದು ಕೊಂಡಿದ್ದಾರೆ. ಅಲ್ಲದೆ ರುದ್ರಭೂಮಿ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಖಾಸಗಿ ವಾಹಿನಿಯಲ್ಲಿ ರಾಜ್ಯದ್ಯಂತ ಸುದ್ದಿಯಾಗಿ ಕ್ಯಾಂಪಿನ ನಿವಾಸಿಗಳು ಕೂಡ ವಾಹಿನಿಯ ಸ್ಟುಡಿಯೋದಲ್ಲಿ ನೆರಪ್ರಸಾರದಲ್ಲಿ ಅಳಲು ತೋಡಿಕೊಂಡಿದ್ದರು ಆದರೂದೂರವಾಣಿ ಮೂಲಕ ಕೆಲ ರಾಜಕೀಯ ನಾಯಕರುಆಸರೆಯಾಗುವುದಾಗಿ ಭರವಸೆ ನೀಡಿದರುಕ್ಯಾಂಪಿನ ಕಡೆತಲೆ ಹಾಕಿಲ್ಲದೆಇರುವುದು ನಿವಾಸಿಗಳ ಬೇಸರಕ್ಕೆಕೈಗನ್ನಡಿಯಾಗಿದೆ.
ನೀರಿಗಾಗಿ ಪರದಾಟ : ಕ್ಯಾಂಪ್‌ಗಳಲ್ಲಿ ಸರಿಯಾಗಿ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಸುಮಾರು ವರ್ಷಇಲ್ಲದಾಗಿತ್ತು, ಸದ್ಯಜೆಜೆ ಎಂ ಯೋಜನೆ ಯಿಂದ ಮನೆ ಮನೆಗೆ ನಳ ಸಂಪರ್ಕ ಹೊಂದಿದ್ದು, ನೀರಿನ ವ್ಯವಸ್ಥೆ ಕಲ್ಪಿಸಿಲ್ಲ, ಸದ್ಯ ಕಾಲುವೆಗೆ ನೀರು ಬರುತ್ತಿರುವುದರಿಂದ 3 ತಿಂಗಳ ಕಾಲ ಸಮಸ್ಯೆಎದುರಾಗುವುದಿಲ್ಲ ಕಳೆದ ತಿಂಗಳಲ್ಲಿ ನೀರಿನಅಭಾವ ಹೆಚ್ಚಾಗಿ ದೂರದಕೆರೆಗೆ ಹೋಗಿ ನೀರುತರಬೇಕಾದ ಅನಿವಾರ್ಯತೆ ನಿರ್ಮಾಣವಾಗಲಿದೆ.
ಪ್ರೌಢ ಶಿಕ್ಷಣಕ್ಕೆ, ಪದವಿ ವಿದ್ಯಾರ್ಥಿಗಳಿಗೆ ತೊಂದರೆ : ಕ್ಯಾಂಪ್ ಗಳಿಂದ ಅನೇಕ ಎಸ್. ಎಸ್. ಎಲ್. ಸಿ. ಪಿಯುಸಿ, ಪದವಿ ವಿದ್ಯಾರ್ಥಿಗಳು ಇದ್ದು, ಬೇರೆಕಡೆಕುರುಗೋಡು, ಕಂಪ್ಲಿ, ಬಳ್ಳಾರಿ, ಹೊಸಪೇಟೆ, ಗಂಗಾವತಿ ಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕು. ಕ್ಯಾಂಪಿನಿAದ ಎಮ್ಮಿಗನೂರು 2-3 ಕಿ. ಮೀ ದೂರದಲ್ಲಿಇದ್ದು, ವಿದ್ಯಾರ್ಥಿಗಳು ಅಲ್ಲಿಗೆ ನಡೆದುಕೊಂಡು ಹೋಗಿ ಅಲ್ಲಿಂದ ಬೇರೆ ಬೇರೆಕಡೆ ಬಸ್ ಗಳಿಗೆ ತೇರಳಬೇಕೆಗಿದೆ. ಇನ್ನೂ 8,9.10ನೇ ತರಗತಿಯ ವಿದ್ಯಾರ್ಥಿಗಳು ಎಮ್ಮಿಗನೂರಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ಕ್ಯಾಂಪಿಗೆ ವಾಹನಗಳ ವ್ಯವಸ್ಥೆಇಲ್ಲದಕಾರಣ ಬೆಳಿಗ್ಗೆ ಮತ್ತು ಸಂಜೆ ರಸ್ತೆಯಲ್ಲಿ ಹೋಗುವ ವಾಹನಗಳ ಡ್ರಾಪ್ ಕೇಳಿಕೊಂಡು ಹೋಗುತ್ತಿದ್ದಾರೆ.
ಸೂರಿಗಾಗಿ ಬೇಸತ್ತಾ ಕ್ಯಾಂಪು :
1.50 ಎಕರೆಜಾಮೀನನ್ನು ಅಂದಿನ ರಂಗರಾಜ್ ಎಂಬ ವ್ಯಕ್ತಿ ಮಾರೆಮ್ಮ ಕ್ಯಾಂಪ್‌ನ ನಿವಾಸಿಗಳಿಗೆ ವಾಸಮಾಡಲು ಸ್ಥಳವನ್ನು ದಾನ ಮಾಡಿದ್ದಾರೆ. ಅದರೆ ಅಂದಿನಿAದ ಇಂದಿನವರೆಗೂ ಸುಮಾರು ದಶಕಗಳ ಕಾಲ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಜನರಿಗೆ ಪಟ್ಟಾ ಸಿಗದಂತಾಗಿದೆ. ಇದರ ಬಗ್ಗೆ ಅನೇಕ ಬಾರಿ ಸ್ಥಳೀಯ ಗ್ರಾಪಂ ಇಲಾಖೆಗೆ ಮತ್ತುP ೆ್ಷÃತ್ರದ ಶಾಸಕರಿಗೆ ಕ್ಯಾಂಪ್‌ನ ನಿವಾಸಿಗಳು ಪಟ್ಟಾ ನೀಡುವಂತೆ ಮನವಿ ಮಾಡಿದರೂ ಪ್ರಯೋಜನೆ ಅಗದಂತಾಗಿದೆ.
ಕೊಟ್ ವರ್ಷ ಗಳಿಂದ ಕ್ಯಾಂಪ್‌ನಲ್ಲಿ ವಾಸಿಸುತ್ತ ಬಂದಿದ್ದೇವೆ. ಅದರೆಯಾವುದೇ ಸವಲತ್ತುಗಳು ಇಲ್ಲ. ಅದರಲ್ಲಿ ಕುಡಿಯುವ ನೀರಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಾಲೆಗಳು ಇಲ್ಲದೂರದ ಗ್ರಾಮಗಳಲ್ಲಿವೆ. ಪಟ್ಟಾಗಳು ಸಿಕ್ಕಿಲ್ಲ. ನಮ್ಮದೇಅಂತ ಹೇಳಿಕೊಳ್ಳಲು ಚುರುಇಲ್ಲದಾಗಿದೆ.


