ಬೈಲಹೊಂಗಲ : ಪಟ್ಟಣದ ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಮಹಾಸ್ವಾಮೀಜಿ ಅವರ 30ನೇ ಜನ್ಮದಿನ ಅಂಗವಾಗಿ ಸಸಿ ನೆಡುವ ಹಾಗೂ ಗುರುವಂದನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಪ್ರಭುನೀಲಕಂಠ ಸ್ವಾಮೀಜಿ ಭಕ್ತರ ಕೋರಿಕೆ ಮೇಲೆ ತಮ್ಮ 30ನೇ ಜನ್ಮ ದಿನದ ಹುಟ್ಟು ಹಬ್ಬ ಆಚರಿಸಿಕೊಂಡು ಸಸಿಗೆ ನೀರುಣಿಸಿ ಮಾತನಾಡಿ, ‘ಬರುವ ದಿನಗಳಲ್ಲಿ ಶ್ರೀಮಠದ ಏಳ್ಗೆಗೆಯ ಜೊತೆಗೆ ಶಿಕ್ಷಣ ಸಂಸ್ಥೆಯ ಬೆಳವಣಿಗೆ ಆಗಲಿದೆ. ಇದಕ್ಕೆ ಪ್ರತಿಯೊಬ್ಬರು ಸಹಾಯ, ಸಹಕಾರ ನೀಡಬೇಕು. ಶ್ರೀಮಠದಲ್ಲಿ ಇನ್ನೂ ವೈಭವ ಅನಾವರಣಗೊಳ್ಳಲ್ಲಿದೆ’ಎಂದರು.
ಪೂಜ್ಯರು ಶ್ರೀಮಠದ ಗುರುಪರಂಪರೆ ಉಳಿಸಿ, ಬೆಳೆಸುವುದರ ಜೊತೆಗೆ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡು ನೂತನ ಅಧ್ಯಕ್ಷರಾಗಿದ್ದಕ್ಕೆ ಭಕ್ತರು ಶುಭಾಶಯ ತಿಳಿಸಿ ಸಂತಸ ವ್ಯಕ್ತಪಡಿಸಿದರು.
ತಾರಿಹಾಳದ ಅಡವಿಶೇಶ್ವರ ದೇವರು, ನಟ ಶಿವರಂಜನ ಬೋಳನ್ನವರ, ಡಿವೈಎಸ್ಪಿ ರವಿ ನಾಯಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ವಿ.ಎಸ್.ಕೋರಿಮಠ, ಶೇಖಪ್ಪ ಜತ್ತಿ, ತಿಪ್ಪಣ್ಣ ಬಿಳ್ಳೂರ, ಬಿ.ಬಿ.ಗಣಾಚಾರಿ, ಮಹಾಂತೇಶ ಅಕ್ಕಿ, ಶಿವಬಸಪ್ಪ ತುರಮರಿ, ಸುಭಾಸ ತುರಮರಿ, ವಿ.ಕೆ.ಬಡಿಗೇರ, ವೀರಭದ್ರ ಬಡಿಗೇರ, ಮಹೇಶ ಕೋಟಗಿ, ಚಂದ್ರಶೇಖರ ಕೊಪ್ಪದ, ನೀಲಕಂಠೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಎನ್.ಸಿ.ಸಿ.ಕ್ಯಾಪ್ಟನ್ ಎಂ.ಸಿ.ಹೇಮಗಿರಿಮಠ ನೇತೃತ್ವದಲ್ಲಿ ಎನ್.ಸಿ.ಸಿ.ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು. ಸಂಜೆ ಗುರುವಂದನಾ ಸಮಾರಂಭ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.