ಹಿರಿಯೂರು : ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಜನಗಣ ಮನ ಬೆಸೆಯುವ ಶಿರ್ಷಿಕೆ ಅಡಿಯ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಏಳಿಗೆಗಾಗಿ ಶ್ರಮಿಸುವ ಮೂಲಕ ಭಾರತ ದೇಶವನ್ನು ವಿಶ್ವದ ಮುನ್ನೆಲೆಗೆ ಕೊಂಡೊಯ್ಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೋದಿ ಅವರನ್ನು ವಿಶ್ವ ಗುರುವನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿಯನ್ನು ಮತ್ತೊಮ್ಮೆ ಕೈ ಹಿಡಿಯೋಣ ಎಂದು ತಿಳಿಸಿದರು.
ನಗರದ ಟಿಬಿ ವೃತ್ತದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿ, ತಾಲೂಕು ಕಛೇರಿ, ಗಾಂಧಿ ವೃತ್ತ, ಆಸ್ಪತ್ರೆ ವೃತ್ತ, ಬಸ್ ನಿಲ್ದಾಣದ ಮೂಲಕ ರಂಜಿತಾ ಹೋಟೆಲ್ ಬಳಿ ಅಂತ್ಯವಾಯಿತು.
ಈ ಸಂದರ್ಬದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ್ , ಎ. ರಾಘವೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್ ಮಸ್ಕಲ್, ಮುಖಂಡರಾದ ಎಂವಿ ಹರ್ಷ, ಎ. ಬಾಲಾಜಿ, ನಿರ್ಮಲ ಪುರುಷೋತ್ತಮ್, ಅಪರ್ಣ ವಿಶ್ವನಾಥ್, ಭವ್ಯ ನಾಗೇಶ್, ಚಂದ್ರಹಾಸ್, ಹೆಚ್. ವೆಂಕಟೇಶ್, ಚಲ್ಮೇಶ್, ಯೋಗೀಶ್, ನಾಗೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.


