ಪಾವಗಡ : ಪಟ್ಟಣದ ಕಸಬಾ ವ್ಯಾಪ್ತಿಯ ಸರ್ವೇ ನಂಬರ್ 18/1 ರವಿಕುಮಾರ್ ಎಂಬುವರ ರೈತರಿಗೆ ಸೇರಿದ ಜಮೀನಿನಲ್ಲಿ ಜಾನುವಾರುಗಳಿಗೆ ಎಂದು ಶೇಖರಣೆ ಮಾಡಿದಂತಹ ಹುಲ್ಲಿನ ಬಣವಿಗೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ನಡೆದಿದೆ.
ರೈತ ರವಿಕುಮಾರ್ ಮಾತನಾಡಿ ಜಾನುವಾರುಗಳಿಗೆ ಮೇವು ಸಿಗೋದೆ ಕಷ್ಟಕರವಾಗಿದೆ ಇಂತಹ ಸಂದರ್ಭಗಳಲ್ಲಿ ಈ ರೀತಿಯಲ್ಲಿ ಘಟನೆ ಸಂಭವಿಸಿರುವುದು ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ.
ಈಗಾಗಲೇ ಜಾನುವಾರು ಗಳಿಗೆ ಮೇವಿಗೆ ಪರಿ ತಪ್ಪಿಸುವ ಪರಿಸ್ಥಿತಿ ಉಂಟಾಗಿದೆ.ಮಳೆ ಈ ಬಾರಿ ಕೈ ಕೊಟ್ಟ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಮೇವು ಶೇಖರಣೆ ಮಾಡಿಕೊಂಡಿದ್ದೆವು ಅಂತದ್ರಲ್ಲಿ ಇಂತಹ ಘಟನೆ ಬಹಳ ಕಷ್ಟಕರವಾಗಿದೆ ಎಂದರು. ಇದರಿಂದ ಮೇವಿನ ಬಣವಿ ಪಕ್ಕದಲ್ಲಿ ಇದ್ದಂತಹ ಮೂರ್ನಾಲ್ಕು ಬೃಹತಾಕಾರದ ಮರಗಳು ಸಹ ಸುಟ್ಟು ಹೋಗಿವೆ ಎಂದರು.
ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಘಟನೆ ಬಗ್ಗೆ ಪರಿಶೀಲನೆ ಮಾಡಿ ಸರ್ಕಾರದಿಂದ ನಷ್ಟ ಪರಿಹಾರದಿಂದ ಕೊಡಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಎಂಬ ರೈತನ ಮಾತು.